ಹೈದರಾಬಾದ್: ತೆಲಂಗಾಣದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಆರ್‌ಎಸ್ ಪಕ್ಷಕ್ಕೆ ನಿರಾಸೆಯಾಗಿದೆ. ಪಕ್ಷದ ಹೀನಾಯ ಸೋಲನ್ನು ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಹಾಗೂ ಮಾಜಿ ಸಚಿವ ಕೆ.ಟಿ.ರಾಮ ರಾವ್ ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ.
ಚುನಾವಣೆ ಫಲಿತಾಂಶಕ್ಕೂ ಮುನ್ನ ಕೆಟಿಆರ್ ಪೋಸ್ಟ್ ಮಾಡಿದ್ದ ಹಳೇ ಟ್ವೀಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಹಳೇ ಟ್ವೀಟ್‌ನಲ್ಲಿ, ಕ್ಯಾಮೆರಾದ ಕಡೆಗೆ ಗನ್ ತೋರಿಸುತ್ತಿರುವ ಚಿತ್ರವಿದೆ. ಈ ಹಳೆಯ ಪೋಸ್ಟ್‌ನ ಶೀರ್ಷಿಕೆಯಲ್ಲಿ, “ಹ್ಯಾಟ್ರಿಕ್ ಲೋಡಿಂಗ್ 3.0. ಸಂಭ್ರಮಿಸಲು ಸಿದ್ಧರಾಗಿ” ಎಂದು ಕೆಟಿಆರ್ ಬರೆದುಕೊಂಡಿದ್ದರು. ಇದನ್ನೂ ಓದಿ: ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು: ಮೋದಿ
This one ain’t gonna age well ????
Missed the mark https://t.co/IUN1vKdTsc
— KTR (@KTRBRS) December 3, 2023
ಆದರೆ ಫಲಿತಾಂಶದ ನಂತರ ಸಚಿವರು ತಮ್ಮದೇ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇವನಿಗೆ ವಾಯಸ್ಸಾಗಿದೆ. ಗುರಿ ತಪ್ಪಿದೆ’ ಎಂದು ಬರೆದುಕೊಂಡಿದ್ದಾರೆ. ಪಕ್ಷದ ಸೋಲಿಗೆ ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ.
ಸಚಿವರ ಟ್ವೀಟ್‌ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್, ಎಷ್ಟೋ ಮಂದಿ ಸೋಲನ್ನು ಮನೋಹರವಾಗಿ ಸ್ವೀಕರಿಸುವುದಿಲ್ಲ. ಸೋಲಿನ ನಂತರವೂ ನಿಮ್ಮ ಹಾಸ್ಯಪ್ರಜ್ಞೆಯನ್ನು ನೀವು ಉಳಿಸಿಕೊಂಡಿರುವುದು ಒಳ್ಳೆಯದು’ ಎಂದು ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ಬೂಸ್ಟ್ – ಸೆಮಿಫೈನಲ್ ಗೆದ್ದ ಮೋದಿ
‘ತಮ್ಮನ್ನು ತಾವೇ ಟ್ರೋಲ್ ಮಾಡಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮತ್ತೊಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ‘ಬೆಟರ್ ಲಕ್ ನೆಕ್ಸ್ಟ್ ಟೈಮ್’ ಎಂದು ಸಚಿವರ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ.