ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‍ಆರ್ ಟಿಸಿ 1,600 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ 3 ದಿನ ಸಂಚಾರ ಮಾಡಲಿವೆ. ಅ.25, 26, 27ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬೆಳಗಾವಿ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ,ಕೊಪ್ಪಳ, ಯಾದಗರಿ, ಬೀದರ್ ಹಾಗೂ ತಿರುಪತಿಗೆ ಅ.25 ರಿಂದ 27ರವರೆಗೆ ಹೆಚ್ಚುವರಿ ಬಸ್ ಗಳು ತೆರಳಲಿವೆ.
Advertisement
Advertisement
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ, ಮೈಸೂರು, ಹುಣಸೂರು, ಕುಶಾಲನಗರ, ಮಡಿಕೇರಿಗೆ ಬಸ್ ಗಳು ಸಂಚರಿಸಲಿವೆ. ಶಾಂತಿನಗರ ಬಸ್ ನಿಲ್ದಾಣದಿಂದ ಹೊರರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳ ವಿವಿಧ ನಗರಗಳಿಗೆ ವಿಶೇಷ ಬಸ್ ಗಳು ತೆರಳಲಿವೆ. ವಿಜಯನಗರ ಬಸವೇಶ್ವರನಗರ, ಮಲ್ಲೇಶ್ವರಂ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಪೀಣ್ಯ, ಕೆಂಗೇರಿ ಉಪನಗರ ಸೇರಿ ವಿವಿಧ ಪ್ರದೇಶಗಳಿಂದ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಬೆಳಗಾವಿ, ಕುಕ್ಕೆಸುಬ್ರಮಣ್ಯ, ತಿರುಪತಿ, ಧರ್ಮಸ್ಥಳಗಳಿಗೆ ವಿಶೇಷ ಬಸ್ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿದೆ.
Advertisement
ಬುಕ್ಕಿಂಗ್ ವ್ಯವಸ್ಥೆ: ಪ್ರಯಾಣಿಕರಿಗೆ ಮುಂಗಡ ಬುಕ್ಕಿಂಗ್ ಕಾಯ್ದಿರುವ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಇ-ಟಿಕೆಟ್ ಬುಕಿಂಗ್ ವೆಬ್ ಸೈಟ್ www.ksrtc.in ಮೂಲಕ ಪಡೆಯಬಹುದು. ಜೊತೆಗೆ 706 ಗಣಕೀಕೃತ ಬುಕಿಂಗ್ ಕೌಂಟರ್ ವ್ಯವಸ್ಥೆ ಸಹ ಮಾಡಲಾಗಿದೆ.