ಬೆಂಗಳೂರು: ಈ ಬಾರಿ ಆಯುಧ ಪೂಜೆಗೂ ದುಡ್ಡಿಲ್ಲದೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ದಿವಾಳಿಯಾಗಿವೆ ಎಂಬ ಮಾತು ಕೇಳಿಬರುತ್ತಿದೆ. ಶಕ್ತಿಯೋಜನೆಗೆ (Shakti Scheme) ಶ್ರಮಿಸುತ್ತಿರೋ ಬಸ್‌ಗಳಿಗೆ ಆಯುಧ ಪೂಜೆಗೆ ತಲಾ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ.
ಆಯುಧ ಪೂಜೆ ಸ್ವಚ್ಛತೆ, ಅಲಂಕಾರಕ್ಕೆ ಕೆಎಸ್‌ಆರ್‌ಟಿಸಿ ಕೇವಲ ಪುಡಿಗಾಸು ಬಿಡುಗಡೆ ಮಾಡಿದೆ. ಕಳೆದ ವರ್ಷದಂತೆ ಈ ಬಾರಿಯೂ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಸಾರಿಗೆ ನಿಗಮ 1 ಬಸ್‌ಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ ನೀಡಿದೆ. ಪ್ರತಿಯೊಂದು ಬಸ್ಸಿನ ಸ್ವಚ್ಛತೆ ಅಲಂಕಾರ ಮತ್ತು ನಿರ್ವಹಣೆಗೆ ಕಡಿಮೆ ಹಣ ಬಿಡುಗಡೆ ಮಾಡಿರುವುದಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭೂಪಿಂದರ್ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!
Advertisement
Advertisement
ಬಸ್‌ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿ ಆಸೆಗೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರಚಿದೆ. ಬಿಡುಗಡೆ ಮಾಡಿರುವ 100 ರೂ. ನಲ್ಲಿ ಒಂದು ಬಸ್‌ಗೆ ಪೂಜೆ ಮಾಡೋಕೆ ಆಗುತ್ತಾ? ಒಂದು ಮಾರು ಸೇವಂತಿಗೆ ಹೂವಿಗೆ 70 ರೂ. ಇರುವಾಗ ಹಬ್ಬದ ದಿನ 100 ರೂ. ನಲ್ಲಿ ಬಸ್‌ಗೆ ಹೇಗೆ ಪೂಜೆ ಮಾಡೋದು? ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಿಧ ರಾಜ್ಯಗಳಲ್ಲಿ ಧರ್ಮ ಪ್ರಚಾರ – ಮತ್ತೆ 14 ಮಂದಿ ಪಾಕ್ ಪ್ರಜೆಗಳು ಅರೆಸ್ಟ್
Advertisement
Advertisement
ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1,000 ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 5,000 ರೂ ಬಿಡುಗಡೆ ಮಾಡಿದೆ. ಎಲ್ಲಾ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರುವಂತೆ ಅರ್ಥಪೂರ್ಣ ವಾಗಿ ಆಯುಧ ಪೂಜೆಯನ್ನು ಮಾಡಲು ಕೆಎಸ್‌ಆರ್‌ಟಿಸಿ ಆದೇಶ ನೀಡಿದೆ. ಇದನ್ನೂ ಓದಿ: RBI ಬಡ್ಡಿ ದರ ಇಳಿಕೆ ಇಲ್ಲ – ಸತತ 10ನೇ ಬಾರಿಗೆ ಯಥಾಸ್ಥಿತಿ ಮುಂದುವರಿಕೆ