ಸ್ಟೇರಿಂಗ್ ಕಟ್ ಆಗಿ ಬಸ್ ಗದ್ದೆಗೆ ನುಗ್ಗಿದ ರಭಸಕ್ಕೆ ಅರ್ಧಕ್ಕೆ ಮುರಿದ ಕರೆಂಟ್ ಕಂಬ!

Public TV
1 Min Read
MANDYA BUS

ಮಂಡ್ಯ: ಕೆಎಸ್‍ಆರ್‌ಟಿಸಿ (KSRTC) ಬಸ್‍ನ (Bus) ಸ್ಟೇರಿಂಗ್‌ ಕಟ್ ಆದ ಪರಿಣಾಮ ಬಸ್ ಗದ್ದೆಗೆ ನುಗ್ಗಿದ್ದು, ಸ್ವಲ್ಪದರಲ್ಲೇ ಬಾರಿ ಅನಾಹುತ ತಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಬಳಿ ಜರುಗಿದೆ.

MANDYA BUS 2

ಅರಸಿಕೆರೆಯಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್‍ನ ಸ್ಟೇರಿಂಗ್‌ ಕಟ್ಟಾಗಿದೆ. ಈ ವೇಳೆ ರಸ್ತೆಯ ಪಕ್ಕದಲ್ಲಿ ಇದ್ದ ಭತ್ತದ ಗದ್ದೆಗೆ ಬಸ್ ನುಗ್ಗಿ ಗದ್ದೆಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ 11 ಕೆವಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದನ್ನೂ ಓದಿ: ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

MANDYA BUS 1

ನೇರವಾಗಿ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಬಸ್‍ನ ವೇಗ ಕಡಿಮೆಯಾಗಿದೆ ಹೀಗಾಗಿ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ (Hospital) ರವಾನಿಸಲಾಗಿದೆ. ಕಿಕ್ಕೇರಿ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇದನ್ನೂ ಓದಿ: ಜನರಿಂದ 2.69 ಕೋಟಿ ಸಂಗ್ರಹ, ಕೇವಲ 29 ಲಕ್ಷ ಬಳಕೆ – ಅಯ್ಯೂಬ್‌ ವಿರುದ್ಧ ಇಡಿ ಚಾರ್ಜ್‌

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *