ಉಡುಪಿ: ಸಾಸ್ತನದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ಪ್ರತಿಭಟನೆ ವೇಳೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ತುಂಬಲಾಯ್ತು. ಬಸ್ ತುಂಬಿದರೂ ನಿಂತಿದ್ದ ಬಸ್ಸು ಸ್ಟಾರ್ಟ್ ಆಗ್ಲೇ ಇಲ್ಲ. ಹೈವೇ ಮಧ್ಯೆ ಬಸ್ ಇದ್ದುದರಿಂದ ರೋಡ್ ಬ್ಲಾಕ್ ಆಯ್ತು. ದಿಕ್ಕು ತೋಚದ ಪ್ರಭಾರ ಎಸ್‍ಪಿ ವಿಷ್ಣುವರ್ಧನ ಪ್ರತಿಭಟನಾಕಾರರನ್ನು ತುಂಬಿದ್ದ ಬಸ್ ತಳ್ಳಲು ಶುರು ಮಾಡಿದರು.
Advertisement
ಪ್ರಭಾರ ಎಸ್‍ಪಿ ಸೇರಿದಂತೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್- ಎಸ್‍ಐ ಮಧು ಸೇರಿದಂತೆ ಪೊಲೀಸರು ಬಸ್ಸನ್ನು ಸುಮಾರು ದೂರ ತಳ್ಳಿದರು. ವಿಪರೀತ ಜನ ಇದ್ದುದರಿಂದ ಮತ್ತಷ್ಟು ದೂರ ಬಸ್ಸನ್ನು ತಳ್ಳಿ ಜರ್ಕ್ ಹೊಡೆದು ಸ್ಟಾರ್ಟ್ ಮಾಡಿಸಬೇಕಾಯ್ತು.
Advertisement
ಪೊಲೀಸರು ಬಂದೋಬಸ್ತ್ ಮಾಡುವುದರ ಜೊತೆ ಎಕ್ಸ್ಟ್ರಾ ಡ್ಯೂಟಿ ಮಾಡಬೇಕಾಗಿ ಬಂತು. ಬಂಧಿತರನ್ನು ಸ್ಥಳಾಂತರಗೊಳಿಸಿ ಬಂದ ಪೊಲೀಸರು, ಕೆಎಸ್‍ಆರ್‍ಟಿಸಿ ಚಾಲಕ ಮತ್ತು ನಿರ್ವಾಹಕನಿಗೆ ಚೆನ್ನಾಗಿಯೇ ಕ್ಲಾಸ್ ತಗೊಂಡ್ರಂತೆ. ಮೊದಲೇ ಉರಿ ಬಿಸಿಲಿನಲ್ಲಿ ಅರ್ಧ ದಿನ ನಿಂತು ಬೆಂದಿದ್ದ ಪೊಲೀಸರಿಗೆ ಬಸ್ ಚಾಲೂ ಆಗದಿದ್ದುದು ಸಿಕ್ಕಾಪಟ್ಟೆ ಗರಂ ಆಗಲು ಕಾರಣವಾಯ್ತು.
Advertisement
Advertisement
ಉಡುಪಿಯ ಸಾಸ್ತಾನದಲ್ಲಿ ಟೋಲ್ ಗೇಟ್ ವಿಚಾರವಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಸುಂಕ ವಸೂಲಿ ಮಾಡಬಾರದೆಂದು ಪ್ರತಿಭಟನಾಕಾರರು ಟೋಲ್ ಮುತ್ತಿಗೆ ಮಾಡಿದ್ರು.