ದಾವಣಗೆರೆ/ ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ (KSRTC Bus) ಕಂದಕಕ್ಕೆ ಉರುಳಿದ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಣಿವೆಹಳ್ಳಿಯಲ್ಲಿ ನಡೆದಿದೆ.
ಬಸ್ ಹೊಸಪೇಟೆಯಿಂದ – ದಾವಣಗೆರೆಗೆ (Davanagere) ಹೊರಟಿತ್ತು. ಮಾರ್ಗ ಮಧ್ಯೆ ಕಣಿವೆಹಳ್ಳಿ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಪರಿಣಾಮ 16 ಜನರಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹರಪನಹಳ್ಳಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್
ಬಸ್ ಕಂದಕಕ್ಕೆ ಉರುಳಿದ್ದರೂ ಸಹ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಗಾಜಿಯಾಬಾದ್ ಎನ್‌ಕೌಂಟರ್ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ