– ಮಗ ಬದುಕುಳಿಯುವುದು ಕಷ್ಟ
ಮಂಡ್ಯ: ಜೆಡಿಎಸ್ ಪರ ಚುನಾವಣೆ ಮಾಡಿದ್ದೇವೆ ಎಂಬ ಕಾರಣಕ್ಕೆ ನನ್ನ ಮಗನನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕೆಎಸ್‍ಆರ್ ಸಿ ನಾಗಮಂಗಲ ಡಿಪೋದ ಡ್ರೈವರ್ ಕಂ ಕಂಡಕ್ಟರ್ ಜಗದೀಶ್ (KSRTC Bus Driver Jagadeesh) ತಂದೆ ರಾಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆದ್ದು ಒಂದೂವರೆ ತಿಂಗಳ ಕಳೆದಿಲ್ಲ. ಆಗಲೇ ಚಲುವರಾಯಸ್ವಾಮಿ (Chaluvaraswamy) ದ್ವೇಷದ ರಾಜಕಾರಣ ಆರಂಭಿಸಿದ್ದಾರೆ. ಜೆಡಿಎಸ್ ಪರ ಚುನಾವಣೆ ಮಾಡಿದ್ದೇವೆ ಎಂಬ ಕಾರಣಕ್ಕೆ ನನ್ನ ಮಗನನ್ನು ಬೇರೆ ಕಡೆ ವರ್ಗಾಯಿಸಿದ್ದಾರೆ. ಇಲ್ಲಸಲ್ಲದ ಸುಳ್ಳು ಕಾರಣಗಳನ್ನು ನೀಡಿ ವರ್ಗಾವಣೆ ಮಾಡಿದ್ದಾರೆ. ಇದರಿಂದ ಮನನೊಂದ ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ
Advertisement
Advertisement
ಈಗ ಮಗನ ಪರಿಸ್ಥಿತಿ ಚಿಂತಾಜನಕವಾಗಿದೆ. ಆತ ಬದುಕುಳಿಯುವುದು ಕಷ್ಟಕರವಾಗಿದೆ. ನಾವು ಅಪ್ಪಟ ಜೆಡಿಎಸ್ ಬೆಂಬಲಿಗರು, ಹಲವು ವರ್ಷಗಳಿಂದ ಕುಮಾರಸ್ವಾಮಿ ಬೆಂಬಲಿಸಿದ್ದೇವೆ. ಸೊಸೆ ಕೂಡ (ಜಗದೀಶ್ ಪತ್ನಿ) ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯೆಯಾಗಿದ್ದಾರೆ. ಇದಲ್ಲೆವನ್ನು ಸಹಿಸಲಾರದೆ ನನ್ನ ಮಗನಿಗೆ ವರ್ಗಾವಣೆ ಕಿರುಕುಳ ನೀಡಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಮುಖಂಡರಾದ ಬಸವರಾಜು ಹಾಗೂ ಮಹದೇವು ಕಾರಣ. ಸಚಿವ ಚಲುವರಾಯಸ್ವಾಮಿಗೆ ಒತ್ತಡ ಹೇರಿ ಮಗನನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ರಾಜೇಗೌಡ ದೂರಿದ್ದಾರೆ.
Advertisement
ಆತ್ಮಹತ್ಯೆಗೆ ಯತ್ನ: ಆತ್ಮಹತ್ಯೆ ಯತ್ನಕ್ಕೂ ಮುನ್ನ ಜಗದೀಶ್ ಡೆತ್‍ನೋಟ್ ಬರೆದಿದ್ದು, ಅದರಲ್ಲಿ ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೆÇೀ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಎಂದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ತಿಳಿಸಿದ್ದಾರೆ.
ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಪರಿಸ್ಥಿತಿ ಚಿಂತಾನಕವಾಗಿದೆ. ಇತ್ತ ಈ ಸಂಬಂಧ ಕರ್ತವ್ಯಕ್ಕೆ ಹಾಜರಾಗದೆ ಸಾರಿಗೆ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಾಗಮಂಗಲದ ಡಿಪೋದಿಂದ ಯಾವುದೇ ಕೆಎಸ್‍ಆರ್ ಟಿಸಿ ಬಸ್‍ಗಳು ಇನ್ನೂ ಹೊರಟಿಲ್ಲ. ಹೀಗಾಗಿ 60ಕ್ಕೂ ಹೆಚ್ಚು ಬಸ್‍ಗಳು ನಿಂತಲ್ಲೇ ನಿಂತಿವೆ. ಬಸ್ ಸಂಚಾರ ಸ್ಥಗಿತ ಹಿನ್ನೆಲೆಯ್ಲಲಿ ನಿಲ್ದಾಣ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಎನಿಸುತ್ತಿದೆ.
Web Stories