ಮಂಡ್ಯ: ಕೆಎಸ್‍ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನ ಆತ್ಮಹತ್ಯೆ ಯತ್ನಕ್ಕೆ ಕಾಂಗ್ರೆಸ್ ಶಾಸಕ ಚಲುವರಾಯಸ್ವಾಮಿ (Chaluvarayaswamy) ಕಾರಣ ಎಂದು ಜಗದೀಶ್ ಸ್ನೇಹಿತರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಚಲುವರಾಯಸ್ವಾಮಿ ತನ್ನ ಚೇಲಾಗಳ ಮಾತು ಕೇಳಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಜಗದೀಶ್ ಕುಟುಂಬ ಜೆಡಿಎಸ್ ಪರ ಗುರುತಿಸಿಕೊಂಡಿತ್ತು. ಸುರೇಶ್ ಗೌಡ ಪರ ಜಗದೀಶ್ (KSRTC Bus Driver Jagadeesh) ಕುಟುಂಬ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಅಲ್ಲದೇ ಜಗದೀಶ್ ಹೆಂಡತಿ ಜೆಡಿಎಸ್ (JDS) ಬೆಂಬಲಿತ ಗ್ರಾ.ಪಂ ಸದಸ್ಯೆ. ಅವರಿಗೆ ಗ್ರಾ.ಪಂ ಅಧ್ಯಕ್ಷೆ ಆಗುವ ಅವಕಾಶ ಇತ್ತು ಎಂದು ಹೇಳಿದ್ದಾರೆ.
Advertisement
Advertisement
ಕಾಂಗ್ರೆಸ್ (Congress) ಮುಖಂಡರು ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವೇ ನಿನ್ನ ಗಂಡನ ಕೆಲಸಕ್ಕೆ ತೊಂದರೆ ಮಾಡ್ತೀವಿ ಎಂದಿದ್ದರು. ಹಾಗಿದ್ದರೂ ಜಗದೀಶ್ ಪತ್ನಿ ಕಾಂಗ್ರೆಸ್ ಹೋಗಲು ನೀರಾಕರಿಸಿದ್ದರು. ಹೀಗಾಗಿ ತನ್ನ ಬೆಂಬಲಿಗರ ಮಾತು ಕೇಳಿ ಚಲುವರಾಯಸ್ವಾಮಿ ದ್ವೇಷದ ರಾಜಕೀಯ ಮಾಡಿದ್ದಾರೆ. ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣರಾಗಿದ್ದಾರೆ. ಜಗದೀಶ್ ಜೀವಕ್ಕೆ ಹೆಚ್ಚು ಕಡಿಮೆ ಆದ್ರೆ ಅವರ ಕುಟುಂಬ ನೋಡಿಕೊಳ್ಳೋರು ಯಾರು ಎಂದು ಸ್ನೇಹಿತರು ಕಿಡಿಕಾರಿದ್ದಾರೆ. ಇದನ್ನೂ ಓದಿ: JDS ಪರ ಪ್ರಚಾರ ಮಾಡಿದ್ದಕ್ಕೆ ಮಗನ ವರ್ಗಾವಣೆ- ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್ ತಂದೆ ಬೇಸರ
Advertisement
Advertisement
ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಜಗದೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಬಗ್ಗೆ ಏನೂ ಹೇಳು ಆಗಲ್ಲ. ಬದುಕಿಸಲು ಪ್ರಯತ್ನ ಮಾಡ್ತೇವೆ ಎಂದು ವೈದ್ಯರು ಹೇಳಿದ್ದಾರೆ.
Web Stories