ರಸ್ತೆಯಲ್ಲೇ ರುಂಡ ಮುಂಡ ಬೇರೆ ಆಯ್ತು – ಕೆಎಸ್‍ಆರ್‌ಟಿಸಿ ಬಸ್‍ಗೆ ಮಹಿಳೆ ಬಲಿ

Public TV
1 Min Read
car

ಬೆಂಗಳೂರು: ಕೆಎಸ್‍ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಅರಮನೆ ರಸ್ತೆಯಲ್ಲಿ ನಡೆದಿದೆ.

KSRTC BUS

ಲಕ್ಷ್ಮೀ ದೇವಿ (50) ಅಪಘಾತದಲ್ಲಿ ಬಲಿಯಾದ ಮಹಿಳೆ. ನಡು ರಸ್ತೆಯಲ್ಲಿಯೇ ಮಹಿಳೆಯ ರುಂಡ ಮುಂಡ ಬೇರೆ ಬೇರೆಯಾಗಿವೆ. ಲಕ್ಷ್ಮೀ ಅವರು ತಮ್ಮ ಸಹೋದರನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಅಣ್ಣ, ತಂಗಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಲಕ್ಷ್ಮೀ ಅವರು ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದು, ತಲೆಯ ಮೇಲೆ ಬಸ್ ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

HELMET

ಅಪಘಾತದ ಪರಿಣಾಮವಾಗಿ ಬಳ್ಳಾರಿಗೆ ಹೋಗುವ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ಮೇಕ್ರಿಸರ್ಕಲ್‍ನಿಂದ ಕಾವೇರಿ ಜಂಕ್ಷನ್‍ವರೆಗೂ ಜಾಮ್ ಆಗಿದೆ. ಲಕ್ಷ್ಮೀ ಅವರು ಹೆಲ್ಮೆಟ್ ಧರಿಸಿದ್ದರು ಸಹಿತ ಬಸ್ ಚಕ್ರದ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕೆಎಸ್‍ಆರ್‌ಟಿಸಿ ಬಸ್ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹನುಮಜಯಂತಿ ವೇಳೆ ಹಿಂಸಾಚಾರ – 4 ರಾಜ್ಯಗಳ 140 ಪುಂಡರು ಅರೆಸ್ಟ್

Police Jeep

ಘಟನೆ ಕುರಿತು ಮಾತನಾಡಿದ ಲಕ್ಷ್ಮೀ ಅವರ ಸಹೋದರ ರಘುನಾಥ್ ಅವರು, ನಾವು ಕೊಡಿಗೆ ಹಳ್ಳಿಯಿಂದ ನನ್ನ ತಂಗಿಗೆ ಬ್ಲಡ್ ಟೆಸ್ಟ್ ಮಾಡಿಸಲು ಮಲ್ಲಿಗೆ ಆಸ್ಪತ್ರೆಗೆ ಹೋಗುತಿದ್ದೆವು. ತುಂಬಾ ನಿಧಾನವಾಗಿಯೇ ಬೈಕ್ ಓಡಿಸುತಿದ್ದೆ. ಹಿಂಬದಿಯಿಂದ ಬಂದು ಬಸ್ ನಮಗೆ ಗುದ್ದಿದೆ. ಸ್ಥಳದಲ್ಲೇ ನನ್ನ ಸಹೋದರಿ ಸಾವನ್ನಪ್ಪಿದ್ದಾಳೆ. ಇಬ್ಬರು ಕೂಡ ಹೆಲ್ಮೆಟ್ ಧರಿಸಿದ್ದೆವು. ರಸ್ತೆ ಬದಿಯಲ್ಲಿ ಹೋಗುತ್ತಿದ್ದಾಗ ಬಸ್ ಗುದ್ದಿದೆ. ಚಾಲಕನ ನಿರ್ಲಕ್ಷ್ಯತನವೇ ಅಪಘಾತಕ್ಕೆ ಕಾರಣ ಎಂದು ಸಿಟ್ಟು ಹೊರ ಹಾಕಿದರು.

ಸ್ಥಳಕ್ಕೆ ಸದಾಶಿವನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article