DharwadKarnatakaLatestLeading NewsMain Post

ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

– 90ಕ್ಕೂ ಹೆಚ್ಚು ಮಂದಿ ಅರೆಸ್ಟ್‌

ಹುಬ್ಬಳ್ಳಿ: ಬೆಂಗಳೂರಿನ ಡಿಜೆಹಳ್ಳಿ ಹಿಂಸಾಚಾರದಂತೆ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಚಿತ ಸಂಚು ಎನ್ನುವುದು ಪಕ್ಕಾ ಆಗ್ತಿದ್ದಂತೆ ನೂರಾರು ಪ್ರಶ್ನೆ ಎದ್ದಿವೆ. ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು? ಮಸೀದಿಯಿಂದ ಬಂದವರಿಗೆ ಲೋಡ್ ಗಟ್ಟಲೆ ಕಲ್ಲುಗಳು ಸಿಕ್ಕಿದ್ದು ಹೇಗೆ? ಪೊಲೀಸರ ವಶದಲ್ಲಿರುವ ಎಂಐಎಂ ಮುಖಂಡನ ಪಾತ್ರವೇನು ಎಂಬ ಪ್ರಶ್ನೆ ಎದಿದೆ.

ರಾತ್ರಿ ಠಾಣೆಯ ಮುಂದೆ ದಿಢೀರ್‌ ಭಾರೀ ಸಂಖ್ಯೆಯಲ್ಲಿ ಒಂದೇ ಸಮುದಾಯದ ಜನ ಸೇರಿದ್ದು ಹೇಗೆ?. ಅಷ್ಟೇ ಅಲ್ಲದೇ ಇಷ್ಟೊಂದು ಕಲ್ಲುಗಳು ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.

HBL_ POLICE

ಶನಿವಾರ ರಾತ್ರಿಯ ಕಲ್ಲು ತೂರಾಟದದ ವೀಡಿಯೋ ಎಲ್ಲಿ ಶೇರ್‌ ಮಾಡದಂತೆ ಮುಸ್ಲಿಮ್‌ ವಾಟ್ಸಪ್‌ ಗ್ರೂಪ್‌ನಲ್ಲಿ ಹರಿದಾಡಿದ್ದ ಆಡಿಯೋ ಈಗ ವೈರಲ್‌ ಆಗಿದೆ. “ವೀಡಿಯೋವನ್ನು ಶೇರ್‌ ಮಾಡಿದರೆ ಪೊಲೀಸರು ನಿಮ್ಮನ್ನು ಗುರುತಿಸಲಿದ್ದಾರೆ. ಅಷ್ಟೇ ಅಲ್ಲದೇ ಅಲ್ಲದೇ ವೀಡಿಯೋ ಆಧಾರದಲ್ಲಿ ನಿಮ್ಮನ್ನು ಜೈಲಿಗೂ ಕಳುಹಿಸಬಹುದು. ಶನಿವಾರ ನಡೆದ ಘಟನೆ ಅಲ್ಲಾನ ಸೂಚನೆಯಂತೆ ನಡೆದಿದೆ” ಎಂಬ ಆಡಿಯೋ ಈಗ ಲಭ್ಯವಾಗಿದೆ.

ರಾತ್ರಿ ಗಲಭೆ ಎಬ್ಬಿಸಿದ ಪುಂಡರು ಬೆಳಗ್ಗೆ ವಿಡಿಯೋ ಹೊರ ಬರುತ್ತಿದ್ದಂತೆ ಗಪ್ ಚುಪ್ ಆಗಿದ್ದಾರೆ. ಧರ್ಮ ದಳ್ಳುರಿಗೆ ಪೊಲೀಸರ ವಶದಲ್ಲಿರುವ ಎಂಐಎಂ ಮುಖಂಡ ಇರ್ಫಾನ್ ಮಾಸ್ಟರ್ ಮೈಂಡ್ ಅನ್ನೋದು ಮೇಲ್ನೋಟಕ್ಕೆ ಪಕ್ಕಾ ಆಗುತ್ತಿದೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ

ಘಟನೆಗೆ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಮುಸ್ಲಿಂ ಸಂಘಟನೆಗಳು ಇದಕ್ಕೆ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಧಾರವಾಡದಲ್ಲಿ ನಡೆದ ನುಗ್ಗಕೇರಿ ಪ್ರಕರಣ ಸೇಡು ತೀರಿಸಿಕೊಳ್ಳಲು ಮತ್ತು ಮುಸ್ಲಿಂ ಸಮುದಾಯದ ಬಲವನ್ನು ತೋರಿಸಲು ಈ ರೀತಿ ಕೃತ್ಯ ಮಾಡಲಾಗಿದೆ. ಅಲ್ಲದೆ ಈ ಹಿಂದೆ ಬೆಂಗಳೂರಿನ ಡಿಜೆ ಹಳ್ಳಿ ಮಾದರಿಯಲ್ಲಿ ಈ ದಾಳಿ ನಡೆಸಿದ್ದು, ಇದರ ಹಿಂದೆ ಅದೇ ಪುಂಡರ ಕೈವಾಡ ಹಿಂದೆ ಎಂಬ ಅನುಮಾನ ಸಹ ಹೊರಹಾಕಿದ್ದಾರೆ. ಘಟನೆ ಬಗ್ಗೆ ಸಾಕ್ಷಿಗಳನ್ನು ಸಹ ಪೊಲೀಸರು ಕಲೆ ಹಾಕುತ್ತಿದ್ದಾರೆ.

ಅಪ್ರಾಪ್ತರಿಗೆ ಧರ್ಮದ ಪ್ರಚೋದನೆ ಮಾಡಿರುವ ಬಗ್ಗೆ ಮತ್ತು ಅಲ್ಲಿಯೇ ಗಲಾಟೆ ಪ್ಲಾನ್ ಮಾಡಿ ಕಲ್ಲುಗಳನ್ನು ತರಲು ಸೂಚನೆ ನೀಡಲಾಗಿತ್ತಾ ಎನ್ನುವ ಅನುಮಾನವನ್ನು ಪೊಲೀಸ್ ಇಲಾಖೆ ವ್ಯಕ್ತಪಡಿಸುತ್ತಿದೆ. ಇದರ ಸತ್ಯಾಸತ್ಯತೆ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು

hbl (2)

90ಕ್ಕೂ ಅಧಿಕ ಜನ ಬಂಧನ:
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 90ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಪುಂಡರ ವಿರುದ್ಧ ಐಪಿಸಿ 143, 147, 148, 341, 353, 307, 427, 504, 506 ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ 1984ರ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಸಂಖ್ಯೆ ನೂರು ಮೀರಲಿದ್ದು 50ಕ್ಕೂ ಹೆಚ್ಚಿನ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿರುವ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published.

Back to top button