ಬೆಳಗಾವಿ: ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಮರು ನೀವಾಗಿ ನೀವೇ ಕಿತ್ತು ಹಾಕಿ. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ (K.S.Eshwarappa) ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 500 ವರ್ಷದ ಕೆಳಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ರು. ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿದ್ರು. ಬಾಬ್ರಿ ಮಸೀದಿ ಅಂದ್ರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಕಾಮುಕನ ಚೇಷ್ಟೆ – ಖಾಸಗಿ ಅಂಗ ಸ್ಪರ್ಶಿಸಿ ಯುವತಿಗೆ ಕಿರುಕುಳ
Advertisement
Advertisement
ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಲಾಠಿ ಗೋಲಿ ಖಾಯೆಂಗೆ ಮಂದಿರ ವಹಿ ಬನ್ ಗಯಾ ಎಂದು ಕೂಗ್ತಿದ್ವಿ. ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ. ಅಲ್ಲಿರುವ ಮಸೀದಿಗಳು ದ್ವಂಸ ಆಗುತ್ತೆ, ದೇವಸ್ಥಾನ ತಲೆ ಎತ್ತುತ್ತದೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಮರು ನೀವಾಗಿ ನೀವೇ ಕಿತ್ತು ಹಾಕಬೇಕು. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕುತ್ತೇವೆ ಎಂದಿದ್ದಾರೆ.
Advertisement
ಸಿದ್ದರಾಮಯ್ಯ ನಾವು ಜಾತ್ಯತೀತವಾದಿಗಳು ಅಂತಾರೆ. ನಾವು ನಿಮಗಿಂತ ಜಾತ್ಯತೀತವಾದಿಗಳು. ಹಿಂದೂ ಮುಸ್ಲಿಂ ಅನ್ಯೋನ್ಯಾಗಿರಬೇಕು ಎನ್ನುವವರು ನಾವು. ನೀವು ನಮಾಜ್ ಮಾಡ್ಕೊಳ್ಳಿ, ನಾವು ಅದರ ತಂಟೆಗೆ ಬರಲ್ಲ. ಬಾಬರ್ ಕಟ್ಟಡ ಈ ದೇಶದ ಜನರಿಗೆ ನೀವು ಗುಲಾಮರಾಗಿದ್ದಿರಿ ಅಂತಾ ಹೇಳ್ತಿತ್ತು. ನೀವಾಗಿ ನೀವೇ ಮಥುರಾ ಹಾಗೂ ಕೃಷ್ಣಾದ ಮಸೀದಿ ತೆಗೆಯಿರಿ. ತೆಗೆಯದಿದ್ದರೆ ಕೊಲೆಗಳಾಗುತ್ತೊ ಇನ್ನೇನಾಗುತ್ತೊ ಗೊತ್ತಿಲ್ಲ. ಅಧಿಕಾರದಾಸೆಗೆ ಪಾಕಿಸ್ತಾನವನ್ನು ನೆಹರೂ ಮಾಡಿದರು. ಈ ದೇಶದಲ್ಲಿ ಈಗಾಗಲೇ ತ್ರಿವಳಿ ತಲಾಕ್ ಬಂದಿದೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಸಂದೇಶ ಸಾರಿದೆ. ನಮಗೆ ಒಂದು ಹೆಣ್ಣು ಒಂದು ಗಂಡು ಇತ್ತು. ಆದರೆ ಮುಸ್ಲಿಮರಿಗೆ ಹಮ್ ಪಾಚ್ ಹಮ್ಕೊ ಪಚ್ಚಿಸ್ ಎಂಬಂತಾಗಿದೆ. ಗೋವು ನಮ್ಮ ತಾಯಿ. ಗೋಹತ್ಯೆ ನಿಷೇಧ ಮಾಡಿದ್ದೀವಿ. ಗೋಹತ್ಯೆ ನಿಷೇಧ ಕಾಯ್ದೆಯನ್ನು ತಾಕತ್ತಿದ್ದರೆ ಹಿಂಪಡೆಯಿರಿ. ಅದನ್ನ ನಾವು ಹಿಂದೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನೈತಿಕ ಪೊಲೀಸ್ಗಿರಿ; 9 ಮಂದಿ ಬಂಧನ
Advertisement
ಸಮಾಜವಾದಿ ಎನ್ನುವ ಸಿದ್ದರಾಮಯ್ಯಗೆ ಅವರ ಥರದ ಮಗನೇ ಹುಟ್ಟಿದ್ದಾನೆ. ಹಿಂದೂರಾಷ್ಟ್ರ ಮಾಡುವ ಜನಗಳು ಎಂಎಲ್ಎ ಆಗಬೇಕು. ಸ್ವಾಮಿ ವಿವೇಕಾನಂದರು ಹೊರ ದೇಶಕ್ಕೆ ಹೋದಾಗ ಅವರನ್ನ ಮೂಸಿ ನೋಡಿರಲಿಲ್ಲ. ನಂತರ ಅವರ ಮಾತಿನಿಂದ ಎಲ್ಲರೂ ಅವರನ್ನು ಗೌರವದಿಂದ ಕಾಣಲು ಶುರುಮಾಡಿದರು. ಅಂತಹ ಧರ್ಮ ಅಂತಹ ಸಂಸ್ಕೃತಿ ನಮ್ಮದು ಎಂದು ತಿಳಿಸಿದ್ದಾರೆ.