– ಯುವಕನಿಗೆ ಹಿಗ್ಗಾಮುಗ್ಗ ತರಾಟೆ, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆಸಾಮಿ
ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಯುವತಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು (Bengaluru) ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕನೋರ್ವ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಮೆಟ್ರೋದಿಂದ ಇಳಿಯುತ್ತಿದ್ದಂತೆ ಯುವತಿ (Bengaluru Woman), ಯುವಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾಳೆ.
Advertisement
Advertisement
ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾಳೆ. ಬಳಿಕ ನೀನು ಇಲ್ಲಿಂದ ಹೋಗೋಹಾಗಿಲ್ಲ, ನಿನಗೆ ಶಿಕ್ಷೆ ಆಗಲೇಬೇಕು, ಮಾತನಾಡದಿದ್ರೆ ನಮಗೆ ನ್ಯಾಯ ಸಿಗಲ್ಲ ಎಂದು ಪಟ್ಟು ಹಿಡಿದು ಕ್ರಮಕ್ಕೆ ಒತ್ತಾಯಿಸಿದ್ದಾಳೆ. ಬಳಿಕ ವಿಚಾರಣೆ ನಡೆಸಿ ಮೆಟ್ರೊ ಅಧಿಕಾರಿಗಳು ಯುವಕನನ್ನ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯುವಕ ತಪ್ಪೊಪ್ಪಿಕೊಂಡ ಬಳಿಕ ಇನ್ನೊಮ್ಮೆ ಹೀಗೆ ಮಾಡದಂತೆ ಕ್ಷಮೆ ಕೇಳಿಸಿ ಕಳುಹಿಸಿದ್ದಾರೆ.
Advertisement
ಘಟನೆ ನಡೆದ ಒಂದು ವಾರದ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿದ್ದ ಯುವಕ ಮೂಲತಃ ಉತ್ತರ ಭಾರತದ ನಿವಾಸಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನವೇ ನಮಗೆ ಹೆರಿಗೆಯಾಗಲಿ: ವೈದ್ಯರ ಬಳಿ ಗರ್ಭಿಣಿಯರ ಮನವಿ
Advertisement
ಮೆಟ್ರೋದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ?
ಮೆಟ್ರೋದಲ್ಲಿ ಯುವತಿಯೊಂದಿಗಿನ ಅಸಭ್ಯ ವರ್ತನೆ ಕಂಡುಬಂದ ಬಳಿಕ ಮಹಿಳೆಯರಿಗೆ ಮೆಟ್ರೋದಲ್ಲಿ ರಕ್ಷಣೆ ಇಲ್ವಾ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಬಿಎಂಟಿಸಿ ಸಾರಿಗೆ ಇಲಾಖೆಯು ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್‌ಗಳನ್ನ ಅಳವಡಿಸಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಮಹಿಳಾ ಸುರಕ್ಷತೆಗೆ ಹೆಚ್ಚುವರಿ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಅಫ್ಘಾನ್ ವಿರುದ್ಧ T20 ಸರಣಿಗೆ ಬಲಿಷ್ಠ ತಂಡ ಪ್ರಕಟ – ಟೀಂ ಇಂಡಿಯಾಕ್ಕೆ ರೋಹಿತ್ ಸಾರಥಿ, ಕೊಹ್ಲಿ ಕಂಬ್ಯಾಕ್