ಕೊಪ್ಪಳ: ನಾನು ನನ್ನ ನಾಲಿಗೆಯನ್ನು ಪವಿತ್ರವಾಗಿ ಇಟ್ಟುಕೊಂಡಿದ್ದೀನಿ. ಆ ಪುಣ್ಯಾತ್ಮನ ಹೆಸರು ಹೇಳಿ ನಾನು ನಾಲಿಗೆ ಹೊಲಸು ಮಾಡಿಕೊಳ್ಳಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
Advertisement
ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಭೇಟಿ ನೀಡಿದ ಈಶ್ವರಪ್ಪ ಅವರು ಆಂಜನೇಯನ ದರ್ಶನ ಪಡೆದ ಬಳಿಕ ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾಂಗ್ರೆಸ್ ಅವರಿಗೆ ತಾಕತ್ ಇದ್ರೆ ಬೀಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಅವರು ಇದ್ದಾರೆ ಎಂದು ಒಂದು ಹೆಸರನ್ನು ಹೇಳಲಿ. ಆಗ ನಾನೇ ಅವರಿಗೆ ಶಹಬ್ಬಾಶ್ ಅಂತೀನಿ ಎಂದು ಕಾಂಗ್ರೆಸ್ ಅವರಿಗೆ ಸವಾಲ್ ಹಾಕಿದರು. ಇದನ್ನೂ ಓದಿ: ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು: ಬಿ.ಸಿ ನಾಗೇಶ್
Advertisement
Advertisement
ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಅವರ ಒಂದು ಹೆಸರು ಹೇಳಲಿ. ಇದು ಪ್ರಚಾರ ತೆಗೆದುಕೊಳ್ಳುವ ತಂತ್ರ. ಪುಗ್ಸಟ್ಟೆ ಆಪಾದನೆ ಮಾಡೋದು ಒಳ್ಳೆಯದಲ್ಲ. ಈ ತಂತ್ರಗಾರಿಕೆಯನ್ನು ಜನ ಒಪ್ಪಲ್ಲ. ಕಾಂಗ್ರೆಸ್ ಅವರು ಬರೀ ಸುಳ್ಳು ಹೇಳ್ತಾರೆ ಎಂದು ಟೀಕಿಸಿದರು.
Advertisement
ಬೀಟ್ ಕಾಯಿನ್ ವಿಚಾರದಲ್ಲಿ ದಾಖಲೆ ಇದೆ ಎಂದು ಅಧಿಕಾರಿಗಳನ್ನು ಕಾಂಗ್ರೆಸ್ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಡಿಕೆಶಿ ಪ್ರಾಮಾಣಿಕ ಆದ್ರೆ ದಾಖಲೆ ಬಿಡುಗಡೆ ಮಾಡಲಿ ಏನೂ ದಾಖಲೆ ಇಟ್ಟುಕೊಂಡು ಬೆಂಕಿ ಹಚ್ಚುತೀರಾ ಎಂದು ಡಿಕೆಶಿ ವಿರುದ್ಧ ಈಶ್ವರಪ್ಪ ಕಿಡಿಕಾರಿದರು.
ಬಿಟ್ ಕಾಯಿನ್ ನಿಂದ ಸಿಎಂ ಬಸವರಾಜ್ ಬೊಮ್ಮಾಯಿಗೆ ಕಂಟಕ ಇದ್ರೆ, ಕೂಡಲೇ ದಾಖಲೆ ಬಿಡುಗಡೆ ಮಾಡಲಿ. ರಾಜ್ಯ, ದೇಶದ ಹಿತದೃಷ್ಟಿಯಿಂದ ದಾಖಲೆ ಬಿಡುಗಡೆ ಮಾಡಲಿ ಎಂದು ಪದೇ ಪದೇ ಸವಾಲನ್ನು ಹಾಕಿದರು. ಇದನ್ನೂ ಓದಿ: ಬಿಗ್‌ಬಾಸ್ ಲವ್ ಬರ್ಡ್ಸ್ ಭೇಟಿಯಾದ ಶುಭಾ ಪೂಂಜಾ
ಸಿದ್ದರಾಮಯ್ಯ ಅವರ ದಲಿತ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಂಜನಾದ್ರಿ ಬೆಟ್ಟದ ಪುಣ್ಯ ಕ್ಷೇತ್ರದಲ್ಲಿ ನಾನು ಸಿದ್ದರಾಮಯ್ಯ ಹೆಸರು ಹೇಳಲ್ಲ. ನನ್ನ ಬಾಯಿಂದ ಅವರ ಹೆಸರು ಹೇಳಲ್ಲ. ನಾನು ನನ್ನ ನಾಲಿಗೆ ಪವಿತ್ರವಾಗಿ ಇಟ್ಟುಕೊಂಡಿದ್ದೀನಿ. ಆ ಪುಣ್ಯಾತ್ಮನ ಹೆಸರು ಹೇಳಿ ನಾನು ನಾಲಿಗೆ ಹೊಲಸು ಮಾಡಿಕೊಳ್ಳಲ್ಲ. ಸಿದ್ದರಾಮಯ್ಯ ಅವರು ನಾನು ದಲಿತ ಎನ್ನುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ಸಿದ್ದರಾಮಯ್ಯ ಅವರು ದಲಿತರು ಹೌದು, ಮುಸ್ಲಿಮರೂ ಹೌದು ಎಂದು ವ್ಯಂಗ್ಯವಾಡಿದರು.