ಹಾವೇರಿ: ಯಾವುದೇ ರಾಜ್ಯದಲ್ಲೂ ಸಿಬಿಐ (CBI) ಕೇಸನ್ನು ವಾಪಸ್ ಪಡೆದ ಇತಿಹಾಸ ಇಲ್ಲ. ಕಾಂಗ್ರೆಸ್ (Congress) ಸರ್ಕಾರ ಡಿಕೆಶಿ (D.K Shivakumar) ಕೇಸ್ ವಾಪಸ್ ಪಡೆದು ಸಚಿವ ಸಂಪುಟದ ಪಾವಿತ್ರ್ಯತೆಯನ್ನೇ ಹಾಳು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐನಿಂದ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಕರ್ನಾಟಕ ರಾಜ್ಯದ ಮರ್ಯಾದೆ ತೆಗೆದಿದೆ. ದೇಶದ ಇತಿಹಾಸದಲ್ಲಿ ಸಚಿವ ಸಂಪುಟ ಎಂದರೆ ಅದು ದೇವಸ್ಥಾನ. ಆ ದೇವಸ್ಥಾನದ ಪಾವಿತ್ರ್ಯತೆಯನ್ನೇ ಕಾಂಗ್ರೆಸ್ ಸರ್ಕಾರ ಹಾಳು ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 500 ಸಿಸಿಟಿವಿ ಪರಿಶೀಲಿಸಿ ಯುವತಿ ಬಟ್ಟೆ ಎಳೆದವನ ಬಂಧನ!
Advertisement
ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. 150 ಕೋಟಿ ರೂ.ಗೂ ಹೆಚ್ಚು ಹಣ 5 ವರ್ಷದಲ್ಲಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ತನಿಖೆ ನಡೆದಿದೆ. ಡಿಕೆಶಿ ತಿಹಾರ್ ಜೈಲಿಗೂ ಹೋಗಿ ಬಂದಿದ್ದಾರೆ. ಅನೇಕ ಬಾರಿ ಕೋರ್ಟ್‍ಗೂ ಹೋಗಿದ್ದಾರೆ. ಕೋರ್ಟ್‍ನಲ್ಲಿ ಇವರ ಅರ್ಜಿ ವಜಾ ಆಗಿದೆ. ಸ್ಪೀಕರ್ ಅನುಮತಿ ಪಡೆದಿಲ್ಲ ಎನ್ನುವುದನ್ನು ಇಷ್ಟು ದಿನ ಕೋರ್ಟ್ ಗಮನಿಸಿಲ್ಲವೇ? ಸಿಬಿಐ ಗಮನಿಸಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
Advertisement
ಸುಪ್ರೀಂ ಕೋರ್ಟ್‍ನ ತಜ್ಞ ನ್ಯಾಯಾಧೀಶರ ಅಭಿಪ್ರಾಯ ಏನಿದೆ ಎಂದರೆ, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡೋದಕ್ಕೆ ಸರ್ಕಾರಕ್ಕೆ ಅಧಿಕಾರ ಇದೆ. ಆದರೆ ಸಿಬಿಐಗೆ ಕೊಟ್ಟ ಕೇಸ್ ವಾಪಸ್ ಪಡೆಯೋ ಅಧಿಕಾರ ಸರ್ಕಾರಕ್ಕೆ ಇಲ್ಲ. ಮಾತೆತ್ತಿದರೆ ಇವರೆಲ್ಲಾ ಸಂವಿಧಾನದ ಬಗ್ಗೆ ಮಾತಾಡ್ತಾರೆ. ಸಂವಿಧಾನ ಗಾಳಿಗೆ ತೂರಿ ಡಿಕೆಶಿ ಕೇಸ್ ವಿತ್ ಡ್ರಾ ಮಾಡಿದ್ದಾರೆ. ಸಿದ್ದರಾಮಯ್ಯ ಆಸಕ್ತಿ ತೆಗೆದುಕೊಂಡು ಡಿಕೆಶಿ ಸಿಬಿಐ ಕೇಸ್ ವಿತ್ ಡ್ರಾ ಮಾಡಿದ್ದಲ್ಲ, ಅದು ನನಗೆ ಗೊತ್ತಿದೆ. ಸೋನಿಯಾ ಹಾಗೂ ರಾಹುಲ್ ಒತ್ತಡಕ್ಕೆ ಕೇಸ್ ವಾಪಸ್ ತೆಗೆಸಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಇರೋ ಸಂದರ್ಭದಲ್ಲಿ ಕೇಸ್ ವಾಪಸ್ ತಗೊಂಡಿದ್ದು ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ. ಸಿಎಂ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಸಿಬಿಐ ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ. ಇದು ಖಂಡನೀಯ, ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
Advertisement
ಡಿಕೆಶಿ ಈವರೆಗೂ ರಾಜೀನಾಮೆ ಕೊಟ್ಟಿಲ್ಲ, ಮೊದಲು ಡಿಕೆಶಿ ರಾಜೀನಾಮೆ ಕೊಡಬೇಕು. ಎಷ್ಟು ದಾಖಲೆಗಳನ್ನು ಇವರು ತಿದ್ದಬಹುದು? ಕೇಸ್ ವಾಪಾಸ್ ಪಡೆಯುವ ನಿರ್ಧಾರ ಮಾಡಿ ಮುಠ್ಠಾಳ ಕೆಲಸ ಮಾಡಿದ್ದಾರೆ. ಈಗಲಾದರೂ ಡಿಕೆಶಿ ರಾಜೀನಾಮೆ ಕೊಡಲಿ. ಇದಕ್ಕಾಗಿ ಸಚಿವ ಸಂಪುಟ ಸೇರಿ ನಿರ್ಧಾರ ಮಾಡಲಿ. ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಎದುರೇ ಸುನಿಲ್ ಕುಮಾರ್, ಎಸ್‍ಪಿ ಅರುಣ್ ನಡುವೆ ಮಾತಿನ ಜಟಾಪಟಿ