– ಶಿವಮೊಗ್ಗದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ವೀಕು ಎಂದ ಮಾಜಿ ಸಚಿವ
ಶಿವಮೊಗ್ಗ: ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ. ಸಾಯುವವರೆಗೂ ನಾನು ಮೋದಿ (Narendra Modi0 ಜೊತೆ ಇರುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ನುಡಿದಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ (Shivamogga Constituency) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರಿಂದು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿದ್ದಾರೆ. ಸಭೆಯಲ್ಲಿ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!
- Advertisement -
- Advertisement -
ಈ ಬಾರಿ ಚುನಾವಣೆಯಲ್ಲಿ ಧರ್ಮದ ಪರವಾಗಿರುವ ಈಶ್ವರಪ್ಪ ಗೆದ್ದೆ ಗೆಲ್ತಾರೆ, ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ, ಭಗವಂತ ನನ್ನ ಮಕ್ಕಳನ್ನು ಹಾಳು ಮಾಡಲಿ. ನರೇಂದ್ರ ಮೋದಿ ಕೇಂದ್ರದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಆದರೆ ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ? ನನ್ನ ರಕ್ತದ ಕಣ-ಕಣದಲ್ಲೂ ಬಿಜೆಪಿ ಇದೆ. ಸಾಯುವವರೆಗೂ ನಾನು ಮೋದಿ ಜೊತೆ ಇರುತ್ತೇನೆ. ಯಡಿಯೂರಪ್ಪ ಅವರು ಕೆಜೆಪಿಗೆ ಹೋಗಿ ಬಂದ್ರು, ನನ್ನನ್ನು ಕಡಿದರೂ ನಾನು ಬೇರೆ ಪಕ್ಷಕ್ಕೆ ಹೋಗಲಿಲ್ಲ ಎಂದು ನುಡಿದಿದ್ದಾರೆ.
- Advertisement -
ಹಿಂದುತ್ವದ ಪರವಾಗಿ ಇದ್ದವರನ್ನು ಮೂಲೆಗುಂಪು ಮಾಡಿದ್ದಾರೆ. ಸಿ.ಟಿ.ರವಿ ಏನು ತಪ್ಪು ಮಾಡಿದ್ದರು? ಮಂತ್ರಿಸ್ಥಾನ ಬಿಟ್ಟು ಪಕ್ಷ ಸಂಘಟನೆಗೆ ಹೋದರು ಅವರಿಗೆ ಯಾಕೆ ಅಧ್ಯಕ್ಷ ಸ್ಥಾನ ಕೊಡಲಿಲ್ಲ? ಕಾಂಗ್ರೆಸ್ ಹಿಂದುಗಳನ್ನ ತುಳಿದು ಮುಸ್ಲಿಮಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಹಿಂದುತ್ವ ಉಳಿಸಬೇಕು ಅದಕ್ಕಾಗಿ ನಾನು ಸ್ಪರ್ಧೆ ಮಾಡ್ತಿದ್ದೀನಿ ಎಂದಿದ್ದಾರೆ. ಇದನ್ನೂ ಓದಿ: ಹದಿಹರೆಯದ ಹುಡುಗರೇ ಇವಳ ಟಾರ್ಗೆಟ್ – ಸೆಕ್ಸ್‌ಗಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ ಮಾಯಗಾತಿ ಅರೆಸ್ಟ್!
- Advertisement -
ನನ್ನ ಜೊತೆಗೂ ಲಿಂಗಾಯತರು ಇದ್ದಾರೆ:
ನನ್ನ ಗುರುತು ಯಾವ್ದು ಅಂತಾ ಏಪ್ರಿಲ್ 19 ರಂದು ಗೊತ್ತಾಗುತ್ತದೆ. ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುತ್ತೇನೆ. ಅಪ್ಪಿ-ತಪ್ಪಿಯೂ ಈ ಬಾರಿ ಶಿವಮೊಗ್ಗದಲ್ಲಿ ಬಿಜೆಪಿಗೆ ವೋಟು ಹಾಕಬೇಡಿ. ಲಿಂಗಾಯತರೆಲ್ಲ ರಾಘವೇಂದ್ರ ಅವರಿಗೆ ವೋಟು ಹಾಕ್ತೀವಿ ಅಂತಾರೆ. ನನ್ನ ಜೊತೆಗೂ ಲಿಂಗಾಯತರು ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೀಕ್ ಕ್ಯಾಂಡಿಡೇಟು ಅಂತಾ ಕಾಂಗ್ರೆಸ್‌ನವರೇ ಹೇಳ್ತಾರೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಕಾಂಗ್ರೆಸ್‌ನವರೇ ನಿಲ್ಲಿಸಿದ್ದಾರಾ? ಯಡಿಯೂರಪ್ಪ ಅವರು ತಮ್ಮ ಮಗನಿಗೆ ಅನುಕೂಲ ಆಗಲಿ ಅಂತಾ ನಿಲ್ಲಿಸಿದ್ದೀರಾ ಗೊತ್ತಿಲ್ಲ. ಇದೇ ತಿಂಗಳಲ್ಲಿ ಚುನಾವಣೆ ಇದೆ. ಇದು ನ್ಯಾಯ-ಅನ್ಯಾಯದ ವಿರುದ್ಧ ನಡೆಯುತ್ತಿರುವ ಚುನಾವಣೆ. ಈ ಲೋಕಸಭಾ ಚುನಾವಣೆಯಲ್ಲಿ ಅಧರ್ಮ ಸೋಲುತ್ತದೆ ಧರ್ಮ ಗೆಲ್ಲುತ್ತದೆ. ಇಂದೇ ಚುನಾವಣೆ ನಡೆದರೂ ನಾನು ಕನಿಷ್ಠ 1 ಲಕ್ಷ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದು ಸವಾಲು ಹಾಕಿದ್ದಾರೆ.