ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ವೈಯುಕ್ತಿಕ ಶೌಚಾಲಯ ಬಳಕೆಯಾಗದಿರುವ ವಿಚಾರವಾಗಿ ಉಡಾಫೆಯಿಂದ ಉತ್ತರಿಸಿದ್ದಾರೆ.
ವೈಯುಕ್ತಿಕ ಶೌಚಾಲಯ ಎಷ್ಟು ಬಳಕೆ ಆಗ್ತಿದೆ? ಬಳಕೆ ಆಗದಿದ್ದರೆ ಇಲಾಖೆಯ ಯೋಜನೆಯ ವಿಫಲತೆ ಅಲ್ಲವೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸುವಾಗ ಉಡಾಫೆ ತೋರಿದ್ದಾರೆ.
Advertisement
Advertisement
ಶೌಚಾಲಯ ಬಳಕೆಯ ಬಗ್ಗೆ ನಿಖರವಾಗಿ ಉತ್ತರ ಕೊಡುವುದು ಕಷ್ಟ. ಬಯಲಿನಲ್ಲಿ ಹೋದರೆ ಅವರಿಗೆ ಆನಂದ ಸಿಕ್ಕರೆ ಏನ್ ಮಾಡೋಣ. ಚೊಂಬು ಹಿಡ್ಕೊಂಡು ಬಯಲಿನಲ್ಲಿ ಹೋದರೆ ಅವರಿಗೆ ಖುಷಿ, ಅದು ಆ ಭಗವಂತನಿಗೆ ಗೊತ್ತು. ಅಲ್ಲದೆ ನೀವು ಬಯಲಿಗೆ ಹೋಗಬೇಡಿ ದಂಡ ಹಾಕ್ತೇವೆ ಅಂತ ಮಾಡೋದಕ್ಕೆ ಆಗಲ್ಲ. ಅದರಲ್ಲೇ ಅವರು ಆನಂದ ಕಂಡರೆ ಏನ್ ಮಾಡೋಣ ಎಂದು ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು
Advertisement
ಹಾಗಾದರೆ ಯೋಜನೆ ಅನುಷ್ಠಾನಗೊಳಿಸಲು ವಿಫಲ ಆದಂತಲ್ವಾ ಅನ್ನುವ ಪ್ರಶ್ನೆಗೆ ಆಕ್ಷೇಪಾರ್ಹ ಉತ್ತರಿಸಿದ ಈಶ್ವರಪ್ಪ, ಅಪ್ಪ, ಅಮ್ಮ ಬಂಗಾರದಂತಹ ಒಳ್ಳೆಯ ಹುಡುಗಿಯನ್ನು ಮದುವೆ ಮಾಡಿ ಕೊಡ್ತಾರೆ. ಚೆನ್ನಾಗಿ ಬಳಸಿಕೊಳ್ಳದಿದ್ದರೆ ಏನ್ ಮಾಡೋಣ? ಹೆಣ್ಮಕ್ಕಳು ಚೊಂಬು ಹಿಡ್ಕೊಂಡು ಬೀದಿಗೆ ಹೋಗ್ತಾ ಇಲ್ವಾ? ಪರಿಸ್ಥಿತಿ ಬದಲಾವಣೆ ಆಗಬೇಕು. ಹೆಣ್ಮಕ್ಕಳು ಜೊತೆಗೆ ಕುತ್ಕೋಬೇಕು. ಪ್ರಪಂಚದ್ದು, ಮನೆಯದ್ದು, ಅಕ್ಕಪಕ್ಕದ ಮನೆಯ ಹೆಣ್ಮಕ್ಕಳ ವಿಚಾರ ಚರ್ಚೆ ಮಾಡಬೇಕು. ಅದರಲ್ಲೇ ಅವರಿಗೆ ಆನಂದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್