ಯಾದಗಿರಿ: ಸಿಎಂ ಇಬ್ರಾಹಿಂನ ಉಗುರಿನ ಧೂಳನ್ನೂ ಸಹಿತ ಬಿಜೆಪಿಗೆ ಸೇರಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಒಬ್ಬ ಸ್ವಾರ್ಥಿ. ಅಧಿಕಾರಕ್ಕಾಗಿ ರಾಜಕಾರಣದಲ್ಲಿ ಇದ್ದಾರೆ. ಸಿಎಂ ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಇಬ್ಬರದ್ದು ಒಂದೇ ಮುಖ. ಅಧಿಕಾರ ಇದ್ದರೆ ಮಾತ್ರ ಕಾಂಗ್ರೆಸ್‍ನಲ್ಲಿರುತ್ತಾರೆ ಇಲ್ಲಾಂದ್ರೆ ಬೈದು ಹೊರಗೆ ಬರುತ್ತಾರೆ ಎಂದು ಕಿಡಿಕಾರಿದರು.
ಸಿಎಂ ಇಬ್ರಾಹಿಂ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕೇಳಿದ್ದರು. ಆದರೆ ಅವರಿಗೆ ಆ ಸ್ಥಾನವನ್ನ ಕೊಟ್ಟಿಲ್ಲ ಅದಕ್ಕೆ ರಾಜಿನಾಮೆ ಕೊಡುತ್ತಿದ್ದಾರೆ. ಜೆಡಿಎಸ್ ಸೇರುತ್ತಾರೆ ಎನ್ನುವ ಮಾಹಿತಿ ಇದೆ. ಅಲ್ಲಿ ಹೋದರೂ ಇದೇ ಕಥೆ ಅವರದ್ದು. ಬಸವಣ್ಣನವರು ಹೇಳದ ಪದಗಳೂ ಸಹ ಇವರ ಬಾಯಲ್ಲಿ ಬರುತ್ತವೆ ಎಂದು ಟೀಕಿಸಿದರು.
ಬಿಜೆಪಿಯವ್ರು ಮಧ್ಯಂತರ ಚುನಾವಣೆಗೆ ಬರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾಕತ್ತಿನ ಮಾತು ಕಾಂಗ್ರೆಸ್‍ನವರು ತಾಕತ್ತಿಲ್ಲದೆ ಮಾತಾಡುತ್ತಿದ್ದಾರೆ. ತಾಕತ್ತಿದೆರ ಎಂದು 28 ಲೋಕಸಭೆ ಕ್ಷೇತ್ರಗಳಲ್ಲಿ ಒಂದೇ ಗೆದ್ದಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋತರು. ಕಾಂಗ್ರೆಸ್ ಉಪ ಚುನಾವಣೆಗಳಲ್ಲಿ ನೆಗೆದು ಬಿದ್ದು ಹೋದ್ದರು. ಶಕ್ತಿಶಾಲಿ ಕಾಂಗ್ರೆಸ್ ಸೋಲಿಸುವ ದೊಡ್ಡ ಪಡೆ ಬಿಜೆಪಿಯಲ್ಲಿದೆ. ಪಂಚರಾಜ್ಯದಲ್ಲಿ ಯಾವ ರೀತಿ ಸೋತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಸೋಲಿಸಿ ನಮ್ಮ ತಾಕತ್ತು ತೋರಿಸುತ್ತೆವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಂದಾಯ ದಾಖಲೆ ಮನೆ ಬಾಗಿಲಿಗೆ- ಯೋಜನೆಗೆ ಸಿಎಂ ಚಾಲನೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಾಚನೆ ವಿಚಾರವಾಗಿ ಮಾತನಾಡಿ, ನನಗೆ ಅದರ ಬಗ್ಗೆ ಗೊತ್ತಿಲ್ಲ. ಪಕ್ಷದಲ್ಲಿ ನಾವೆಲ್ಲ ಕಾರ್ಯಕರ್ತರು. ಕಾರ್ಯಕರ್ತರನ್ನ ಮಂತ್ರಿ ಮಾಡಬಹುದು, ಸಿಎಂ ಮಾಡಬಹುದು, ಕಾರ್ಯಕರ್ತರಾಗಿ ಉಳಿಸಬಹುದು ಇದೆಲ್ಲ ಯುದ್ಧದ ರಣತಂತ್ರ. ಕೃಷ್ಣನ ರಣತಂತ್ರವೇ ಬಿಜೆಪಿ ರಣತಂತ್ರವಾಗಿದೆ ಎಂದರು. ಇದನ್ನೂ ಓದಿ: ಫಾಲ್ಸ್‌ನಲ್ಲಿ ಮುಳಗಿ RSS ಕಾರ್ಯಕರ್ತ ಸಾವು!
ದಿಗ್ವಿಜಯ ಸಾಧನೆಗೆ ಕೃಷ್ಣ ಯಾವ ರೀತಿ ರಣತಂತ್ರ ಮಾಡಿದ್ರೋ ಅದೇ ರೀತಿ ರಣತಂತ್ರ ಮಾಡಿ ಯುದ್ಧಕ್ಕೆ ತಯಾರಿದ್ದೇವೆ. ಮಂತ್ರಿಗೂ ತಯಾರು, ಕಾರ್ಯಕರ್ತರಾಗಲು ತಯಾರು ಯಾವುದೇ ಅಪೇಕ್ಷೆ ಇಲ್ಲ. ಹಿರಿಯರು, ಕೇಂದ್ರ ನಾಯಕರು ಹಾಗೂ ಪರಿವಾರದ ನಾಯಕರು ಏನ್ ಹೇಳ್ತಾರೆ ಅದನ್ನ ಕೇಳುತ್ತೇವೆ. ಪಕ್ಷದಲ್ಲಿ ಇದೆ ಆಗಬೇಕು ಅಂತ ಪ್ರಶ್ನೆ ಇಲ್ಲ. ಕಾಂಗ್ರೆಸ್ ನಿರ್ನಾಮ ಮಾಡೋದೆ ನನ್ನ ಆಸೆ ಎಂದು ಹೇಳಿದರು.