ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವಾಗಿ ಕೆ.ಎಸ್ ಈಶ್ವರಪ್ಪ ಅವರು ಮನೆ ಮನೆಗಳಿಗೆ ತೆರಳಿ ಅವರ ಪರವಾಗಿ ಇಂದು ಪ್ರಚಾರವನ್ನು ನಡೆಸಿದ್ದಾರೆ.
ರಾಮನಗರದಲ್ಲಿ ಪಕ್ಷಕ್ಕೆ ಕೈ ಕೊಟ್ಟ ಚಂದ್ರಶೇಖರ್ ಅವರ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುತಂತ್ರ ರಾಜಕಾರಣ ಮಾಡಿ ಚಂದ್ರಶೇಖರ್ ಪಕ್ಷ ತೊರೆದಿದ್ದಾರೆ. ಇದು ನಮಗೆ ಪಾಠ. ಮುಂದೆ ನಾವು ಅಭ್ಯರ್ಥಿಗಳನ್ನು ಸ್ಪರ್ಧಿಸಲು ನಿರ್ಧರಿಸುವಾಗ ಈ ಘಟನೆ ಮುಂದೆ ಇಟ್ಟುಕೊಟ್ಟು ಮುಂದಿನ ದಿನಗಳಲ್ಲಿ ಟಿಕೆಟ್ ಹಂಚಲಾಗುವುದು ಎಂದು ತಿಳಿಸಿದರು.
Advertisement
Advertisement
ಕಾಂಗ್ರೆಸ್ ಪಕ್ಷವೇ ಅವರನ್ನ ಕಳುಹಿಸಿ ಪುನಃ ಅವರನ್ನ ವಾಪಾಸ್ ಕರೆಸಿಕೊಂಡಿದ್ದು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಒಳ್ಳೆಯದಲ್ಲ. ರಾಮನಗರದಲ್ಲಿ ಬಿಜೆಪಿ ಶಕ್ತಿ ಕಡಿಮೆ, ಡಿಕೆ ಬ್ರದರ್ಸ್ ಅವರೇ ಬಿಜೆಪಿಗೆ ಚಂದ್ರಶೇಖರ್ ನ ಕಳುಹಿಸಿ ಮತ್ತೆ ತಮ್ಮ ಪಕ್ಷಕ್ಕೆ ಕರೆಸಿಕೊಂಡಿದ್ದಾರೆ. ಅವರು ಕುತಂತ್ರ ರಾಜಕಾರಣ ನಡೆಸುತ್ತಿದ್ದಾರ ಎನ್ನುವ ಅನುಮಾನ ಬರುತ್ತಿದೆ. ಮತದಾರರು ಯಾರಿಗೆ ಮತದಾನ ಮಾಡಬೇಕು ಎಂಬ ಗೊಂದಲ ಕೂಡಾ ರಾಮನಗರದಲ್ಲಿ ಕಾಡುತ್ತಿದೆ ಎಂದರು.
Advertisement
Advertisement
ಕಾಂಗ್ರೆಸ್ ಇರಬಹುದು ಜೆಡಿಎಸ್ ಇರಬಹುದು ಮನೆ ಮನೆಗೆ ಹೋಗಿ ಪ್ರಚಾರ ಮಾಡುವುದನ್ನು ಮರೆತೆ ಬಿಟ್ಟಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಪ್ರತಿ ಬೂತ್ ನಲ್ಲಿ ಕೂಡಾ ಎರಡು ಮೂರು ಬಾರಿ ಹೋಗಿ ಭೇಟಿ ಮಾಡಿ ನಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ. ನಾಳೆ ದಿನ ಮತದಾರರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾರರು ಮತದಾನವನ್ನು ಮಾಡಬೇಕು ಎಂದು ಪ್ರಾರ್ಥನೆ ಎಲ್ಲವನ್ನು ಮಾಡಿದ್ದೇವೆ. ಶಿವಮೊಗ್ಗ ನಗರದಲ್ಲಂತೂ ಹತ್ತು ಹತ್ತು ಮನೆಗಳಿಗೆ ಒಬ್ಬ ಪ್ರಮುಖರನ್ನು ಮಾಡಿಕೊಂಡು ಏನೇನೂ ಬೇಕೋ ಎಲ್ಲ ಪ್ರಯತ್ನಗಳನ್ನು ನಡೆಸಿದ್ದೇವೆ. ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರದಲ್ಲಿ ಸಾಕಷ್ಟು ಮುಂದೆ ಇದ್ದೇವೆ. ಈ ಬಾರಿ ಶಿವಮೊಗ್ಗದಲ್ಲಿ ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.
ನಾನು 1989ರಲ್ಲಿ ಗೆದ್ದಾಗ ಕರ್ನಾಟಕ ರಾಜ್ಯದಲ್ಲಿ ನಾಲ್ಕೇ ಜನ ಎಂಎಲ್‍ಎಗಳಿದ್ದವೂ ಜೆಡಿಎಸ್‍ನಲ್ಲಿದ್ದವರೂ ಬಿಜೆಪಿ ಪರ ಬಂದಿದ್ದರು. ಈಗ ಬಿಜೆಪಿ ಸಂಘಟನೆಯೂ ಬೆಳೆದುಕೊಂಡಿದೆ. ಸಂಘಟನೆಯಲ್ಲಿ ಬೆಳೆದ ಕಾರ್ಯಕರ್ತರು ಸಾಕಷ್ಟು ಜನರಿದ್ದಾರೆ. ಬಿಜೆಪಿಗೆ ಹೊಸದಾಗಿಯೂ ಕೂಡ ಅನೇಕರು ಬಂದು ಕಾಂಗ್ರೆಸ್ ಜೆಡಿಎಸ್‍ನಿಂದ ಬಂದು ಸೇರಿಕೊಂಡಿದ್ದಾರೆ. 4 ರಿಂದ 104 ಹೇಗಾಯಿತು. ಬಿಜೆಪಿ ಒಂದು ಪ್ರಾಮಾಣಿಕ ಪಕ್ಷ. ಇಲ್ಲಿ ನರೇಂದ್ರ ಮೋದಿ ಅವರು ಇದ್ದಾರೆ. ಈ ಪಕ್ಷ ದೇಶವನ್ನು ಒಳ್ಳೆಯದು ಮಾಡುತ್ತೆ. ಈ ವಿಶ್ವಾಸದಿಂದಲೇ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿರುವವರೂ ಬಂದು ಬಿಜೆಪಿಯೊಂದಿಗೆ ಸೇರಿದ್ದಾರೆ. ಹಳೇ ಕಾರ್ಯಕರ್ತರಯ ಹೊಸ ಕಾರ್ಯಕರ್ತರು ಎಂಬ ಪ್ರಶ್ನೆಯೇ ಇಲ್ಲ. ಅನೇಕರು ಅಲ್ಲಿಂದ ಬಂದು ಶಾಸಕರು ಕೂಡ ಆಗಿದ್ದಾರೆ. ಈ ನಿಟ್ಟಿನಲ್ಲಿ ಚಂದ್ರಶೇಖರ್ ಅವರು ಸೇರಿಸಿಕೊಂಡೆವು. ಆದರೆ ಕುತಂತ್ರ ರಾಜಕಾರಣ ಮಾಡಿಕೊಂಡು ಹೋಗಿದ್ದು, ನಾವು ಗಮನಿಸಬೇಕಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv