ಬೆಂಗಳೂರು: ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ಸೇರ್ಪಡೆ ಮಾಡಿ ಸರ್ಕಾರ ಆಮಂತ್ರಣ ಕೊಟ್ಟಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸಲಾಗಿದೆ. ಬೆಂಗಳೂರು ನಗರ ಅಹ್ವಾನ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ಸೇರ್ಪಡೆ ಮಾಡಲಾಗಿದೆ.
Advertisement
ಅಧಿಕೃತವಾಗಿ ಪತ್ರ ಕೊಟ್ಟವರ ಹೆಸರು ಸೇರ್ಪಡೆ ಮಾಡದಂತೆ ಸಿಎಂ ಸೂಚನೆ ನೀಡಿದ್ದಾರೆ. ಆದ್ರೆ ವಿಧಾನಸಭೆ ವಿಪಕ್ಷ ನಾಯಕರಾದ ಶೆಟ್ಟರ್, ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಅಧಿಕೃತವಾಗಿ ಸರ್ಕಾರಕ್ಕೆ ಪತ್ರ ರವಾನಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಶಿಷ್ಟಾಚಾರ ಪಾಲಿಸಿ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದೆ.
Advertisement
Advertisement
ಬೆಂಗಳೂರು ಸೆಂಟ್ರಲ್ ಲೋಕಸಭೆ ಸದಸ್ಯ ಪಿ.ಸಿ.ಮೋಹನ್ ಹೆಸರು ಕೂಡ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದೆ. ನವೆಂಬರ್ 10ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
Advertisement
ಅತ್ತ ಧಾರವಾಡದಲ್ಲಿ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಸಂಸದ ಪ್ರಹ್ಲಾದ್ ಜೋಶಿ ಹೆಸರನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ. ಟಿಪ್ಪು ಜಯಂತಿ ಆಮಂತ್ರಣದಲ್ಲಿ ತಮ್ಮ ಹೆಸರು ಮುದ್ರಿಸದಂತೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮೊದಲೇ ಕೋರಿದ್ರು. ಸಂಸದರ ಕೋರಿಕೆ ಹಿನ್ನೆಲೆ ಅವರ ಹೆಸರು ಕೈ ಬಿಟ್ಟಿದೆ. ಜೋಶಿ ಹೊರತು ಪಡಿಸಿ ಬಿಜೆಪಿಯ ಇತರೆ ಜನಪ್ರತಿನಿಧಿಗಳ ಹೆಸರು ಮುದ್ರಿತವಾಗಿದೆ.
ಅನಂತ್ ಕುಮಾರ ಹೆಗಡೆ ಹೆಸ್ರು ಕೈ ಬಿಟ್ಟು ಬೆಳಗಾವಿ ಜಿಲ್ಲಾಡಳಿತದಿಂದ ಹೊಸ ಆಹ್ವಾನ ಪತ್ರಿಕೆ ಮುದ್ರಣ https://t.co/U33sY8UZgl#AnanthKumarHegde #TipuJayanti #SureshAngadi #Belagavi @AnantkumarH @mepratap @siddaramaiah pic.twitter.com/U6FfiSl4sP
— PublicTV (@publictvnews) November 8, 2017
ನಾಳೆಯ ಟಿಪ್ಪು ಜಯಂತಿಗೆ ಇಂದಿನಿಂದ್ಲೇ ನಿಷೇಧಾಜ್ಞೆ – ಮಡಿಕೇರಿಯಲ್ಲಿ ಎಲ್ಲಿ ನೋಡಿದ್ರೂ ಪೊಲೀಸರು https://t.co/aVHa9TTmIT #Madikeri #TipuJayanthi #PoliceSecurity pic.twitter.com/u4kdwJYcd6
— PublicTV (@publictvnews) November 9, 2017