ಮಂಡ್ಯ: ರಾಜ್ಯದ ಹಲವೆಡೆ (Rain) ಮಳೆಯಾಗುತ್ತಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಸುಳಿವೇ ಇಲ್ಲ. ಇದರಿಂದ ಕನ್ನಂಬಾಡಿ ಒಡಲಲ್ಲಿ (KRS Dam) ನೀರಿನ ಮಟ್ಟ 89 ಅಡಿಗೆ ಕುಸಿತ ಕಂಡಿದೆ.
ದಿನೇ ದಿನೇ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಇದರಿಂದ ಕಾವೇರಿ ನೀರಿಗೆ (Kaveri Water) ಸಮಸ್ಯೆಯಾಗುವ ಭೀತಿ ಎದುರಾಗುತ್ತಿದೆ. ಮುಂಗಾರು ತಡವಾದ್ರೆ ಕುಡಿಯುವ ನೀರಿಗೆ ಸಹ ಕಂಟಕ ಎದುರಾಗುವ ಸಾಧ್ಯತೆ ಇದೆ. ಈಗ ಡ್ಯಾಂನಲ್ಲಿ ಕೇವಲ 15 ಟಿಎಂಸಿ ನೀರು ಮಾತ್ರ ಇದೆ. ಈ 15 ಟಿಎಂಸಿಯಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಉಳಿದ 8 ಟಿಎಂಸಿಯಲ್ಲಿ ಬೆಳೆಗೂ ನೀರು ಕೊಡಬೇಕು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸಬೇಕಾಗಿದೆ. ಇದನ್ನೂ ಓದಿ: ಡೇಂಜರ್‌ನಲ್ಲಿದ್ದರೂ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ನಿರಾಕರಿಸಿದ ಪಾಕ್
ಸದ್ಯ ರಾಜ್ಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಭಾಗದಲ್ಲಿ ಮಳೆ ಆಗುತ್ತಿಲ್ಲ. ಜೂನ್‍ನಲ್ಲಿಯೂ ಮುಂಗಾರು ಮಳೆ ತಡವಾದರೆ ನೀರಿಗೆ ಹಾಹಾಕಾರ ಎದುರಾಗಲಿದೆ. ಇದನ್ನೂ ಓದಿ: ಅಪ್ಪಂಗೂ, ತಾತನಿಗೂ ಇಬ್ರೂ ಹೆಂಡ್ತಿರು, ನಿನ್ನ ಮದ್ವೆ ಆಗ್ತೀನಿ ಅಂತ ಕಥೆ ಕಟ್ಟಿದ್ದ- ಮನು ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತೆ
ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 89.15 ಅಡಿ.
ಗರಿಷ್ಠ ಸಾಮಥ್ರ್ಯ – 49.452 ಟಿಎಂಸಿ.
ಇಂದಿನ ಸಾಮಥ್ರ್ಯ – 15.437 ಟಿಎಂಸಿ.
ಒಳ ಹರಿವು – 150 ಕ್ಯುಸೆಕ್.
ಹೊರ ಹರಿವು – 347 ಕ್ಯುಸೆಕ್.