ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂ (KRS Dam) ಕಳೆದ ಐದು ವರ್ಷದ ಅವಧಿಯಲ್ಲಿ ನೀರಿನ ಪ್ರಮಾಣ ಅತ್ಯಂತ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಈ ಬಾರಿ ಹಿಂಗಾರು ಮಳೆಯೂ ಬಿದ್ದಿಲ್ಲ. ಈಗಾಗಲೇ ಆರಂಭವಾಗಬೇಕಿದ್ದ ಮುಂಗಾರು ಮಳೆಯೂ ಸಹ ಬಿದ್ದಿಲ್ಲ.
124.80 ಅಡಿಗಳ ಗರಿಷ್ಠ ಮಟ್ಟವಿರುವ ಕೆಆರ್‌ಎಸ್ ಡ್ಯಾಂನಲ್ಲಿ 82.32 ಅಡಿಗಳು ಅಷ್ಟೇ ನೀರು ಇದೆ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡುವುದಾದರೇ ಕೆಆರ್‌ಎಸ್ ಡ್ಯಾಂನ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ದು, ಸದ್ಯ 11.847 ಟಿಎಂಸಿ ನೀರು ಇದೆ. 11.847 ಟಿಎಂಸಿ ಪೈಕಿ ಬಳಕೆಗೆ ಇರುವ ನೀರು 4.847 ಟಿಎಂಸಿ ಅಷ್ಟೇ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಈ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ. ಇದನ್ನೂ ಓದಿ: ಮಂಡ್ಯದ ರೈತರ ಒತ್ತಡಕ್ಕೆ ಮಣಿದ ಸರ್ಕಾರ – KRSನಿಂದ ನಾಲೆ ನೀರು
Advertisement
Advertisement
ಒಂದು ವೇಳೆ ಈ ತಿಂಗಳು ಮಳೆ ಬೀಳದೆ ಇದ್ದರೆ, ಜುಲೈ ಎರಡನೇ ವಾರದಿಂದ ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
Advertisement
ಕೆಆರ್‌ಎಸ್ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 82.32 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ -11.847 ಟಿಎಂಸಿ
ಒಳ ಹರಿವು – 570 ಕ್ಯೂಸೆಕ್
ಹೊರ ಹರಿವು – 3,233 ಕ್ಯೂಸೆಕ್ ಇದನ್ನೂ ಓದಿ: ಕೈಕೊಟ್ಟ ವರುಣ – ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ
Advertisement
ಕೆಆರ್‌ಎಸ್ ಕಳೆದ ವರ್ಷ ಈ ದಿನದ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 105.55 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 27.482 ಟಿಎಂಸಿ
ಒಳ ಹರಿವು – 1,425 ಕ್ಯೂಸೆಕ್
ಹೊರ ಹರಿವು – 1,143 ಕ್ಯೂಸೆಕ್