ಮಂಡ್ಯ: 1 ವರ್ಷದ ಅವಧಿಯಲ್ಲಿ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ (KRS Dam) 3 ಬಾರಿ ಭರ್ತಿಯಾಗುವ ಮೂಲಕ ದಾಖಲೆ ಬರೆದಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಕಳೆದ 4-5 ದಿನಗಳಿಂದ ಹೆಚ್ಚಳವಾಗಿದೆ. ಹೀಗಾಗಿ ಕೆಆರ್‌ಎಸ್ ಜಲಾಶಯ ಈ ವರ್ಷ 3ನೇ ಬಾರಿಗೆ ಭರ್ತಿಯಾಗಿದೆ.
ಈ ವರ್ಷ ಜುಲೈ, ಸೆಪ್ಟೆಂಬರ್ ಹಾಗೂ ಇದೀಗ ಅಕ್ಟೋಬರ್ ತಿಂಗಳಿನಲ್ಲಿ ಕೆಆರ್‌ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿರುವುದು ಹಳೆ ಮೈಸೂರು ಭಾಗದ ಜನರಲ್ಲಿ ಹಾಗೂ ಮಂಡ್ಯದ ರೈತರಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: ಉಗ್ರರನ್ನು ಮಟ್ಟ ಹಾಕಲು ಉತ್ತರ ಭಾರತದ ಹಲವೆಡೆ NIA ರೇಡ್
124.80 ಗರಿಷ್ಠ ಅಡಿಗಳಿರುವ ಕೆಆರ್‌ಎಸ್ ಡ್ಯಾಂ ಅಷ್ಟೇ ಅಡಿಗಳಷ್ಟು ತುಂಬಿ ಭರ್ತಿಯಾಗಿದೆ. ಒಳಹರಿವಿನ ಪ್ರಮಾ 36,733 ಕ್ಯೂಸೆಕ್ ಇದ್ದು, ಹೊರ ಹರಿವಿನ ಪ್ರಮಾಣ 33,633 ಕ್ಯೂಸೆಕ್ ಇದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ಗರಿಷ್ಠ ಸಂಗ್ರಹದ ಸಾಮರ್ಥ್ಯವಿದ್ದು, ಸಂಪೂರ್ಣವಾಗಿ 49.452 ಟಿಎಂಸಿ ನೀರು ಭರ್ತಿಯಾಗಿದೆ. ಇದನ್ನೂ ಓದಿ: ಸರ್ಕಾರಿ ನೌಕರನಿಗೆ ಕಪಾಳಮೋಕ್ಷ ಮಾಡಿದ ಹಾಸನ ಎಸಿ