ತಮಿಳು ನಟ ಧನುಷ್‌ಗೆ (Dhanush) ಬಾಲಿವುಡ್ ಸಿನಿಮಾ ಏನು ಹೊಸದಲ್ಲ. ರಾಂಜಾನ, ಅತ್ರಾಂಗಿ ರೆ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್‌ನ ಹೊಸ ಚಿತ್ರಕ್ಕೆ ಧನುಷ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೃತಿ ಸನೋನ್ (Kriti Sanon) ಜೊತೆ ನಟ ರೊಮ್ಯಾನ್ಸ್ ಮಾಡಲಿದ್ದಾರೆ.
ಈ ಹಿಂದೆ ‘ರಾಂಜಾನ’ ಚಿತ್ರ ನಿರ್ದೇಶನ ಮಾಡಿದ್ದ ಆನಂದ್ ಎಲ್. ರೈ ಅವರ ಹೊಸ ಸಿನಿಮಾಗೆ ನಟಿಸಲು ಧನುಷ್ ಒಪ್ಪಿಗೆ ನೀಡಿದ್ದಾರೆ. ಈ ಚಿತ್ರಕ್ಕೆ ಕೃತಿ ಸನೋನ್ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಈ ಜೋಡಿಯ ಹೊಸ ಪ್ರೇಮ ಕಥೆಗೆ ‘ತೇರೆ ಇಷ್ಕ್ ಮೇ’ (Tere Ishk Mein) ಎಂದು ಟೈಟಲ್ ಇಡಲಾಗಿದೆ.
ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಕೃತಿ ಮತ್ತು ಧನುಷ್ ಇಬ್ಬರೂ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್
ಸದ್ಯ ಧನುಷ್ ‘ಕುಬೇರ’ (Kubera) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಡೈರೆಕ್ಟರ್ ಆನಂದ್ ಎಲ್. ರೈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಧನುಷ್ ಮತ್ತು ಕೃತಿ ಸನೋನ್ ಜೋಡಿಯಾಗ್ತಿರೋದ್ರಿಂದ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.