ಮಂಡ್ಯ: ನಗರದ ಖಾಸಗಿ ಸಮುದಾಯ ಭವನದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮತ್ತೊಂದು ಪಾದಯಾತ್ರೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಮೇಕೆದಾಟು (Mekedatu) ಪಾದಯಾತ್ರೆ ಬಳಿಕ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಕೃಷ್ಣ ನೀರಾವರಿ (Krishna River) ಯೋಜನೆಗೆ ಸಂಬಂಧಿಸಿದಂತೆ `ಕೃಷ್ಣ ಯಾತ್ರೆ’ (Krishna Yatra) ಹಮ್ಮಿಕೊಳ್ಳಲಾಗುತ್ತದೆ. ಈ ಬಗ್ಗೆ ಸ್ಥಳೀಯ ನಾಯಕರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆ.30ರಿಂದ ಮೈಶುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಗೋಪಾಲಯ್ಯ
Advertisement
Advertisement
ಹೂವಿನ ಹಾರ ತರಬೇಡಿ:
ಇನ್ನೂ ಅದರ ತಯಾರಿ ಆರಂಭವಾಗಿಲ್ಲ. ಭಾರತ್ ಜೋಡೋ (Bharat Jodo) ಯಾತ್ರೆ ಮುಗಿದ ನಂತರ ನಾನೇ ನೇತೃತ್ವ ತೆಗೆದುಕೊಳ್ಳುತ್ತೇನೆ. ಕೃಷ್ಣ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಮಾಡ್ತೇವೆ. ಈಗ ಭಾರತ್ ಜೋಡೋ ಯಾತ್ರೆ ಮುಗಿದ ನಂತರ ಅದರ ಚಿತ್ರಣ ಆ ಮೇಲೆ ಹೇಳ್ತೀನಿ. ಈಗ ನಮ್ಮದು 22 ದಿನಗಳ ಭಾರತ್ ಜೋಡೋ ಯಾತ್ರೆ. ಯಾತ್ರೆಗೆ ಯಾವ ಕಾರ್ಯಕರ್ತನೂ (Congress Workers) ಹೂವಿನ ಹಾರ ತರಬೇಡಿ, ಯಾರಿಗೂ ಹೂವಿನ ಹಾರ ಹಾಕಬೇಡಿ. ಹೂವಿನ ಹಾರ ಹಾಕಿಸಿಕೊಳ್ಳಲು ಪೊಲೀಸ್ (Police) ಹಾಗೂ ಸೆಕ್ಯೂರಿಟಿ ಬಿಡಲ್ಲ. ನಿಮ್ಮ ಅಭಿಮಾನ ಪ್ರೀತಿ ಜನ ಸಂಘಟನೆಯಲ್ಲಿ ಇರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್
Advertisement
Advertisement
ಶಾಂತಿ, ನೆಮ್ಮದಿಗಾಗಿ ಜೋಡೋ ಯಾತ್ರೆ:
ದೇಶದ ಭವಿಷ್ಯ, ನೆಮ್ಮದಿ, ಶಾಂತಿಗಾಗಿ ನಡೆಯುತ್ತಿರುವ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಇವಾಗ ಕರ್ನಾಟಕ ಭ್ರಷ್ಟ ರಾಜ್ಯ ಅಂತಾ ಹೆಸರು ತಕೊಂಡಿದೆ. ಹಿಂದೆ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಸರ್ಕಾರ ಅಂದಿದ್ರು. ಆದರೆ ಈಗ ನಾವು ಆರೋಪ ಮಾಡುತ್ತಿಲ್ಲ. ಗುತ್ತಿಗೆದಾರರೇ 40 ಪರ್ಸೆಂಟ್ ಸರ್ಕಾರ ಅಂತಿದ್ದಾರೆ. ಯಾವ ಕಚೇರಿಗೆ ಹೋದರೂ ಲಂಚ, ಹಣ, ಹಣ ಅಂತಿದ್ದಾರೆ. ಇದು ನಿಮ್ಮ ಮನೆಗೆ ಬಂದ ಭಾಗ್ಯ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ದೇಹದಾನ ಮಾಡಿ ಸಾರ್ಥಕತೆ ಮೆರೆದ ಅಭಿಮಾನಿ ಶಿಲ್ಪಾ
ಕಾಸುಕೊಟ್ಟು ಯಾರನ್ನೂ ಕರೆತರಬೇಡಿ:
7 ಸೀಟ್ ಗೆದ್ದಾಗ ದಳದವರು ಸ್ಥಳೀಯ ಸಂಸ್ಥೆ, ಪದವೀಧರರ ಕ್ಷೇತ್ರ ಗೇಲ್ಲೋಕೆ ಆಗಲಿಲ್ಲ. ನೀವೆಲ್ಲರೂ ಒಟ್ಟಾಗಿ ದುಡಿದಿದ್ದಕ್ಕೆ ಅದು ಸಾಧ್ಯವಾಯ್ತು. ಈ ಪಾದಯಾತ್ರೆಯಿಂದ ಸಂಘಟನೆಗೂ ಸಹಕಾರಿಯಾಗಲಿದೆ. ನಾಳೆಯಿಂದಲೇ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ಮಾಡಬೇಕು. ಮಂಡ್ಯ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನ ಬರಬೇಕು. ಆದರೆ ಕಾಸು ಕೊಟ್ಟು ಯಾರನ್ನೂ ಕರೆತರಬೇಡಿ, ವಾಹನ ವ್ಯವಸ್ಥೆ ಬೇಕಿದ್ರೆ ನಾವೇ ಮಾಡಿಕೊಡ್ತೇವೆ. ಬದ್ಧತೆ, ನಾಯಕತ್ವ ಇರೋರನ್ನ ಯಾತ್ರೆಗೆ ಕರೆತನ್ನಿ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಆನ್ ಲೈನ್ ನೋಂದಣಿ ಆರಂಭವಾಗಿದೆ. ಈ ಕೂಡಲೇ ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೆಜಿಎಫ್ ಬಾಬು ಬಗ್ಗೆ ಕೆಂಡಮಂಡಲವಾದ ಡಿಕೆಶಿ, ಅವನ್ನಾ ಸಸ್ಪೆಂಡ್ ಮಾಡಿ ಬಿಡ್ತೀನಿ. ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ಬೈದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.