ಬೆಂಗಳೂರು: ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಫೇಸ್‍ಬುಕ್‍ನಲ್ಲಿ ವಿವಾದಾತ್ಮಕವಾಗಿ ಬರಹವನ್ನು ಪೋಸ್ಟ್ ಮಾಡಿದ್ದಾರೆ.
ದಲಿತರು ಉಡುಪಿ ಚಲೋ ಮಾಡಿದ್ದ ಸಂದರ್ಭದಲ್ಲಿ ಮಠದ ಶುದ್ಧೀಕರಣಕ್ಕೆ ಅನುಮತಿ ನೀಡಿದ್ದ ಪೇಜಾವರ ಶ್ರೀಗಳು ಇದೀಗ ಮಠದಲ್ಲಿ ನಡೆದ ಇಫ್ತಾರ್ ಕೂಟವನ್ನು ಬೆಂಬಲಿಸುತ್ತಿದ್ದಾರೆ. ಹಾಗಾದರೆ ದಲಿತರು ಮುಸ್ಲಿಂಮರಿಗಿಂತಲೂ ಕೀಳಾದರೆ ಎಂದು ಅಮೀನ್ ಮಟ್ಟು ಪ್ರಶ್ನಿಸಿದ್ದಾರೆ.
ಈ ಎಫ್‍ಬಿ ಪೋಸ್ಟ್ ಗೆ ಇಫ್ತಾರ್ ಕೂಟದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ ರಹೀಂ ಉಚ್ಚಿಲ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಅಮೀನ್ ಮಟ್ಟು ಯಾಕೆ ಈ ರೀತಿ ಹೇಳ್ತಿದ್ದಾರೆ ಅಂತ ನನಗೆ ಅರ್ಥವಾಗ್ತಿಲ್ಲ. ಇಲ್ಲಿ ದಲಿತರು ಮುಸ್ಲಿಮರು ಎಂಬ ಪ್ರಶ್ನೆ ಇಲ್ಲ. ಈ ಹಿಂದೆ ದಲಿತ ಸಮುದಾಯದ ಕೆಲವು ಮಂದಿ ಅಲ್ಲಿಗೆ ಹೋಗಿದ್ದು ಸ್ವಾಮೀಜಿ ವಿರುದ್ಧವಾಗಿ, ಮಠದ ವಿರುದ್ಧವಾಗಿ. ಮಠದ ವಿರುದ್ಧ ಹೋರಾಟ ಮಾಡಲು. ಆದ್ರೆ ನಾವು ಮುಸ್ಲಿಮರು ಹೋಗಿದ್ದು ಸ್ವಾಮೀಜಿಯ ಆಹ್ವಾನದ ಮೇಲೆ. ಆದ್ದರಿಂದ ಮಠದ ವಿರುದ್ಧ ಹೋದವರ ಮನಸ್ಸು ಶುದ್ಧಿ ಮಾಡುವ ಕೆಲಸ ಆಗಿದೆ. ಅದು ಕೂಡ ಮಠದಿಂದ ಆಗಿದ್ದಲ್ಲ. ಮಠದ ವಿಶ್ವಾಸವಿದ್ದವರಿಂದ ಆಗಿದ್ದು. ನಾವು ಪರಿಶುದ್ಧವಾದ ಮನಸ್ಸಿನಿಂದ ಹೋಗಿದ್ದರಿಂದ ಆ ರೀತಿ ಮಾಡೋ ಪ್ರಶ್ನೆಯೇ ಇಲ್ಲ. ಶುದ್ಧ ಮನಸ್ಸಿನಿಂದ ಹೋಗಿದ್ದೇವೆ. ಇಲ್ಲಿ ಹಿಂದೂ, ಮುಸ್ಲಿಂ, ದಲಿತ ಎಂಬ ವಿಚಾರವೇ ಬರುವುದಿಲ್ಲ. ಅಮೀನ್ ಮಟ್ಟು ಈ ರೀತಿ ಹೇಳಿಕೆ ನೀಡಿ ದಲಿತರ ಓಲೈಕೆ ಮಾಡಲು ಹೊರಟಿದ್ದು, ಇದರಲ್ಲಿ ಖಂಡಿತ ಯಶಸ್ವಿಯಾಗಲ್ಲ ಎಂದಿದ್ದಾರೆ.
ಚುನಾವಣೆ ಉದ್ದೇಶ ಇಟ್ಕೊಂಡು ಅಮೀನ್ ಮಟ್ಟು ಈ ರೀತಿ ಹೇಳಿದ್ದಾರೆ. ಮೊದಲು ಅಮೀನ್ ಮಟ್ಟು ಅಂತವರ ಮನಸ್ಸನ್ನು ಶುದ್ಧಿ ಮಾಡ್ಬೇಕು. ಕರ್ನಾಟಕ ರಾಜ್ಯದ ಜನತೆ ಕಾಂಗ್ರೆಸ್‍ಗೂ ಹಾಗೂ ಅಮೀನ್ ಮಟ್ಟು ಮನಸ್ಸನ್ನು ಶುದ್ಧಿ ಮಾಡಬೇಕಿದೆ. ಮುಸ್ಲಿಂ ಸಮುದಾಯ ಆಕ್ರೋಶಗೊಳ್ಳುವ ರೀತಿಯಲ್ಲಿ ಮಟ್ಟು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಈ ಬಗ್ಗೆ ಉಡುಪಿ ಚಲೋದಲ್ಲಿ ಪಾಲ್ಗೊಂಡ ಜಿಲ್ಲೆಯ ದಲಿತ ಮುಖಂಡ ಸುಂದರ್ ಮಾಸ್ಟರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಸ್ವಾಮೀಜಿಯದ್ದು ದ್ವಂದ್ವ ನಿಲುವು. ಶ್ರೀಗಳ ನಡವಳಿಕೆ ಡೋಂಗಿತನ. ಆಗ ದಲಿತರು ರಸ್ತೆಯಲ್ಲಿ ನಡೆದ ಕೂಡಲೇ ಇಡೀ ಉಡುಪಿ ಮಲಿನವಾಗಿದೆ. ಈಗ ಇಫ್ತಾರ್ ಕೂಟ ನಡೆದಾಗ ಮಠದ ಒಳಗಡೆ ಹೋದಾಗ ಮಲಿನವೇ ಆಗಿಲ್ಲ. ಗೋಮೂತ್ರ ಹಾಕಿ ಶುದ್ಧೀಕರಣ ಮಾಡುವ ಅಗತ್ಯವಿಲ್ಲ. ದಲಿತರು ಬಂದಾಗ ಏನಾಗಿತ್ತು ಅವರಿಗೆ? ಸ್ವಾಮೀಜಿ ದಲಿತರು ಮತ್ತು ಮುಸ್ಲೀಮರ ಬಗ್ಗೆ ಇಬ್ಬಗೆ ನೀತಿ ಅನುಸರಿಸಿದ್ದಾರೆ ಎಂದು ದೂರಿದ್ದಾರೆ.
ಅಮಿನ್ ಮಟ್ಟು ಅವರ ಫೇಸ್‍ಬುಕ್ ಪೋಸ್ಟ್,