ಗದಗ: ಮುಡಾ ಹಗರಣ (MUDA Scam) ವಿಚಾರದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮಮೇಲೆ ಬಿಟ್ಟಿದ್ದಾರೆ. ಇದು ಪೊಲಿಟಿಕಲ್ ಅಟ್ಯಾಕ್ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಹೇಳಿದರು.
ಬುಧವಾರ ನಗರದ ತೋಂಟದಾರ್ಯ ಶಿವಾನುಭವ ಮಂಟಪದಲ್ಲಿ ನಡೆದ ರಾಜಕೀಯ ಸಂತ ಡಿ.ಆರ್ ಪಾಟೀಲ ಗ್ರಂಥ ಬಿಡುಕಡೆ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಡಿ ಎಂಬುದು ಜಾರಿ ನಿರ್ದೇಶನಾಲಯ (ED) ಅಲ್ಲ, ಅದು ರಾಜಕೀಯವಾಗಿ ವಿಚಂಟಿಂಗ್ ಏಜೆನ್ಸಿ ಅದು. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋಕೆ. ವಿರೋಧ ಪಕ್ಷದ ನಾಯಕರನ್ನು ಬಲಿಯಾಕಲಿಕ್ಕೆ ಅಷ್ಟೇ ಇಡಿ ಇರುವ ಉದ್ಯೋಗ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ದೇಶದಲ್ಲಿ ಅವರು ಇಲ್ಲಿಯವರಗೆ ಯಾರ ಮೇಲೆ ಕೇಸ್ ಹಾಕಿದ್ದಾರೆ? ಬರೀ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಕಪ್ಪುಹಣ ಇದ್ದವರ ಮೇಲೆ ಕೇಸ್ ಹಾಕಿದ್ದಾರಾ? ಸ್ವಿಸ್ ಬ್ಯಾಂಕ್‌ನಲ್ಲಿ ದುಡ್ಡು ಇಟ್ಟವರ ಮೇಲೆ ಕೇಸ್ ಹಾಕಿದ್ದಾರಾ? ಇಂತಹ ಒಬ್ಬರ ಮೇಲೆ ಇಡಿ ಕೇಸ್ ಹಾಕಿರುವುದನ್ನು ತೋರಿಸಿ ಅಂತ ಪ್ರಶ್ನೆ ಮಾಡಿದರು. ಇಡಿ ಎಂಬುದು ಬಿಜೆಪಿಯ ಒಂದು ಅಂಗ ಸಂಸ್ಥೆ. ಈ ಅಂಗ ಸಂಸ್ಥೆ ಕೆಲಸ, ರಾಜಕೀಯ ವಿರೋಧಿಗಳನ್ನು ಬಲಿಯಾಗುವುದು. ಇಡೀ ದೇಶದಲ್ಲಿ ಬಿಜೆಪಿವರು ಅದನ್ನೆ ಮಾಡಿದ್ದಾರೆ. ರಾಜಕೀಯ ವಿರೋಧಿಗಳಿಗೆ ಹಿಟ್ ಆಂಡ್ ರನ್ ಮಾಡೋದು ಇವರ ಕೆಲಸವಾಗಿದೆ ಎಂದು ಆರೋಪಿಸಿದರು.
Advertisement
Advertisement
ಕರ್ನಾಟಕ ಉಪಚುನಾವಣೆಯಲ್ಲಿ 3 ಸ್ಥಾನ ಕಾಂಗ್ರೆಸ್ ಗೆದ್ದ ಮೇಲೆ, ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕಳೆದ ವಿಧಾನ ಸಭೆ ಹಾಗೂ ಉಪ ಚುನಾವಣೆಯಲ್ಲೂ ನಮ್ಮನ್ನು ಸೋಲಿಸಲು ಆಗಲಿಲ್ಲ. ಅದಕ್ಕೆ ಇಡಿ ಎಂಬ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದಾರೆ. ಇದು ಪೊಲಿಟಿಕಲ್ ಅಟ್ಯಾಕ್. ಬಿಜೆಪಿನವರು ಜನಗಳ ಬಳಿ ಮತ ಪಡೆದು ಗೆಲ್ಲಲಾಗದೇ ನಿರಾಸೆಯಲ್ಲಿ ಇಡಿಯನ್ನ ಛೂ ಬಿಟ್ಟಿದಾರೆ. ಅವರನ್ನು ನಾವು ಲೀಗಲ್ ಆಗಿ ಎದುರಿಸುತ್ತೆವೆ, ಜನತಾ ನ್ಯಾಯಾಲಯದಲ್ಲಿ ಪ್ರಜಾಪ್ರಭುತ್ವ ಮುಖಾಂತರ ಎದುರಿಸುತ್ತೆವೆ. ಅವರದ್ದು ಬರೀ ಬೋಗಸ್ಸು, ಸುಳ್ಳು, ಜನರನ್ನು ಬೇರೆಕಡೆ ಸೆಳೆಯಲು 6 ತಿಂಗಳಿಂದ ಪ್ರಯತ್ನ ಮಾಡ್ತಿದ್ದಾರೆ. ಫೇಲ್ ಆದ್ರೂ ಬಿಡ್ತಿಲ್ಲ. ಇದೊಂದು ರಾಜಕೀಯ ಪಿತೂರಿ ಅದು ಅಂದ್ರು.
ಇನ್ನು ವಕ್ಫ್ ಬೋರ್ಡ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಮ್ ಪ್ರತ್ಯೇಕ ಹೋರಾಟ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಯಾವುದೋ ವಿಷಯ ತೆಗೆದುಕೊಂಡು. ಒಬ್ಬರ ಮೇಲೆ ಒಬ್ಬರು ಕೈ ಸಾಧಿಸಲು ಅವರ ಆಂತರಿಕ ರಾಜಕೀಯ ಕಚ್ಚಾಟವದು. ಬಿಜೆಪಿನವರ ಅವಧಿಯಲ್ಲಿ ಸುಮಾರು 4 ಸಾವಿರ ಆಸ್ತಿ ವಕ್ಫ್ ಖಾತೆಗೆ ಮಾಡಿಕೊಟ್ಟಿದ್ದಾರೆ. ಆಗ ಇವರೆಲ್ಲಾ ಎಲ್ಲಿ ಹೋಗಿದ್ರು? ಬಿಜೆಪಿನವರು ಹೋರಾಟ ಮಾಡ್ತಿರುವುದು ಜನ್ರನ್ನು ಯಾಮಾರಿಸಲು. ಕಾಂಗ್ರೆಸ್ ಸರ್ಕಾರದ ಮೇಲೆ ಇರುವ ಜನ್ರ ಅಭಿಮಾನ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಜನರ ಮನಸ್ಸು ಬೇರೆಕಡೆ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ ಎಂಧು ಕಿಡಿ ಕಾರಿದರು.