ಬೆಂಗಳೂರು: ಲೋಕಾಯುಕ್ತ ಪೊಲೀಸರಿಂದ (Lokayukta Police) ಬಂಧನಕ್ಕೆ ಒಳಗಾದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರ ಪ್ರಶಾಂತ್ ಮಾಡಾಳ್‌ಗೆ (Prashanth Madal) ಬಿಜೆಪಿ ಸರ್ಕಾರದಿಂದಲೇ ಶ್ರೀರಕ್ಷೆ ಇತ್ತಾ ಎಂಬ ಪ್ರಶ್ನೆ ಎದ್ದಿದೆ.
ಈ ಹಿಂದೆ ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್‌ನಲ್ಲಿ (KRIDL) 55 ಕೋಟಿ ಹಣ ಅಕ್ರಮ ವರ್ಗಾವಣೆಯಾಗಿತ್ತು. ಈ ಪ್ರಕರಣದಲ್ಲಿ ಕೆಆರ್‌ಐಡಿಎಲ್ ಉಪ ಹಣಕಾಸು ಅಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ಹೆಸರು ಕೇಳಿಬಂದಿತ್ತು. ಆದರೆ ಅಂದು ಪ್ರಶಾಂತ್ ಮಾಡಾಳ್ ಹೆಸರನ್ನು ವಿಚಾರಣೆಯಿಂದ ಬಿಜೆಪಿ ಸರ್ಕಾರ ಕೈಬಿಟ್ಟಿತ್ತು.
ಏನಿದು ಪ್ರಕರಣ?
ಕೆಆರ್‌ಐಡಿಎಲ್ ಹಣವನ್ನು ಬೇರೆಯವರ ಖಾತೆಗ ವರ್ಗಾಯಿಸಿ 55 ಕೋಟಿ ಹಣವನ್ನು ಮಂಗಳೂರಿನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಅಧಿಕಾರಿಗಳನ್ನು 2017ರಲ್ಲಿ ಅಮಾನತು ಮಾಡಿದ್ದ ಸರ್ಕಾರ ಇಲಾಖಾ ವಿಚಾರಣೆ ಮತ್ತು ಸಿಐಡಿ ತನಿಖೆಗೆ ಒಪ್ಪಿಸುವಂತೆ ಶಿಫಾರಸ್ಸು ಮಾಡಿತ್ತು. ಇದನ್ನೂ ಓದಿ: ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ
ಕ್ಲೀನ್‌ಚಿಟ್ ಸಿಕ್ಕಿದ್ದು ಹೇಗೆ?
ಇಲಾಖಾ ವಿಚಾರಣೆ ವೇಳೆ 4 ಮಂದಿ ಪೈಕಿ ಪ್ರಶಾಂತ್ ಹೂಡಿಕೆ ಸಮಿತಿ ಸದಸ್ಯನಲ್ಲ, ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಅಭಿಪ್ರಾಯಪಟ್ಟು ಪ್ರಕರಣದಿಂದ ಖುಲಾಸೆ ಮಾಡಲಾಗಿತ್ತು. ಪಂಚಾಯತ್ ರಾಜ್ ಅಧೀನ ಕಾರ್ಯದರ್ಶಿ ಖುಲಾಸೆ ಆದೇಶ ನೀಡಿದ್ದರು. ಇಲಾಖಾ ತನಿಖೆಯಿಂದ ಪ್ರಭಾವ ಬಳಸಿ ಪ್ರಶಾಂತ್ ಮಾಡಾಳ್ ಬಚಾವ್ ಆಗಿದ್ದ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮತ್ತು ಅಂದಿನ ಸಿಎಂ ಯಡಿಯೂರಪ್ಪದಿಂದ ಪ್ರಶಾಂತ್ ಪಾರಾಗಿದ್ದ ಆರೋಪ ಈಗ ಕೇಳಿ ಬಂದಿದೆ.
ಮೂವರು ಅಧಿಕಾರಿಗಳಾದ ವೀರನಗೌಡ ಪಾಟೀಲ್, ಎಂ ವಿ ಪ್ರಶಾಂತ್, ಶಂಕರಾಚಾರಿ ಮೇಲೆ ಇಲಾಖಾ ತನಿಖೆ ಮುಂದುವರೆಸಲಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ.
ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು ಈಗ ಲೋಕಾಯುಕ್ತ ಬಲೆಗೆ ಪ್ರಶಾಂತ್ ಬೀಳುತ್ತಿದ್ದಂತೆ ಹಳೇ ಪ್ರಕರಣದ ಬಗ್ಗೆ ಸಿಐಡಿ ಮಾಹಿತಿ ಕೇಳಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.