ಬೆಂಗಳೂರು: ಕೆ.ಆರ್.ಪುರಂ (K.R.Puram) ಸರ್ವೆ ಸೂಪರ್‌ವೈಸರ್ ಕೆ.ಟಿ ಶ್ರೀನಿವಾಸ್‌ಗೆ ಸೇರಿದ 14 ಕಡೆಗಳಲ್ಲಿ ಲೋಕಾಯುಕ್ತ (Lokayukta) ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ (Ride) ನಡೆಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದಾರೆ.
ತುಮಕೂರು (Tumakuru) ಹಾಗು ಬೆಂಗಳೂರಿನ (Bengaluru) 14 ಕಡೆ ಲೋಕಾ ದಾಳಿ ನಡೆದಿದ್ದು, 5 ಲಿಕ್ಕರ್ ಲೈಸೆನ್ಸ್‌ಗಳನ್ನು (Liquor License) ಹೆಂಡತಿ ಹಾಗೂ ಸಹೋದರಿಯ ಹೆಸರಿನಲ್ಲಿ ಹೊಂದಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿದೆ. ಕೆ.ಟಿ ಶ್ರೀನಿವಾಸ್‌ಗೆ ಸೇರಿದ ಎಷ್ಟೆಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?
Advertisement
Advertisement
ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ?
* ಅಂದ್ರಳ್ಳಿಯಲ್ಲಿ 2.70 ಲಕ್ಷ ರೂ. ಮೌಲ್ಯದ ನಿವೇಶನ.
* ಬೆಂಗಳೂರಿನ ಹೆಣ್ಣೂರು ಗ್ರಾಮದಲ್ಲಿ ಸಹೋದರಿ ಕೆ.ಟಿ ಪುಷ್ಪಲತಾ ಹೆಸರಿನಲ್ಲಿ 83.45 ಲಕ್ಷ ರೂ. ಮೌಲ್ಯದ ನಿವೇಶನ.
* 60 ಲಕ್ಷ ರೂ. ಮೌಲ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ.
* ರಾಯಪುರ ಗ್ರಾಮದಲ್ಲಿ ಪತ್ನಿ ರಾಜೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಮೌಲ್ಯದ 5 ಗುಂಟೆ ಜಮೀನು.
* ಪತ್ನಿ ಹಾಗೂ ಸಹೋದರಿಯ ಹೆಸರಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಉದ್ಯಮ
* ತುಮಕೂರಿನ ಬಾಣಾವರದಲ್ಲಿ 50 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್
* ಸಹೋದರಿ ಹೆಸರಿನಲ್ಲಿ ತುಮಕೂರಿನ ನಂಜೇಗೌಡನ ಪಾಳ್ಯದಲ್ಲಿ 20 ಲಕ್ಷ ರೂ. ಮೌಲ್ಯದ ಬಾರ್.
* ಸಹೋದರ ಕೆ.ಟಿ ವೆಂಕಟೇಗೌಡ ಹೆಸರಲ್ಲಿ ತುಮಕೂರಿನ ಭೈರಸಂದ್ರದಲ್ಲಿ 25 ಲಕ್ಷ ರೂ. ಮೌಲ್ಯದ ಬಾರ್ ಅಂಡ್ ರೆಸ್ಟೊರೆಂಟ್.
* ಪತ್ನಿ ರಾಜೇಶ್ವರಿ ಹೆಸರಲ್ಲಿ ಮತ್ತೊಂದು 40 ಲಕ್ಷ ರೂ. ಮೌಲ್ಯದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್
* 10 ಲಕ್ಷ ರೂ. ಮೌಲ್ಯದ ಎಸ್ ಕ್ರಾಸ್ ಕಾರು.
* ಕೊತ್ತನೂರಿನಲ್ಲಿ 10 ಲಕ್ಷ ರೂ. ಮೌಲ್ಯದ ನಿವೇಶನ.
Advertisement
Advertisement
ಒಟ್ಟು ಅಂದಾಜು 3.53 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್
Web Stories