ಬೆಂಗಳೂರು: ತಡರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಗೆ ಕೆ.ಆರ್ ಪುರಂನ ಕೃಷ್ಣ ಥಿಯೇಟರ್ ಗೋಡೆ ಕುಸಿದು 24 ಬೈಕ್ಗಳು ಜಖಂ ಗೊಂಡಿದೆ.
ಇತ್ತೀಚೆಗಷ್ಟೇ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅಭಿನಯಿಸಿದ `777 ಚಾರ್ಲಿ’ ಸಿನಿಮಾ ಸೆಕೆಂಡ್ ಶೋ ನೋಡಲು ಜನರು ಬಂದಿದ್ದರು. ಈ ವೇಳೆ ತಮ್ಮ ಬೈಕ್ಗಳನ್ನು ಕಾಂಪೌಂಡ್ ಬಳಿ ಪಾರ್ಕ್ ಮಾಡಿದ್ದರು. 11 ಗಂಟೆ ಸುಮಾರಿಗೆ ಬೈಕ್ಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಮೆಟ್ರೋ ಮೇಲ್ಸೇತುವೆ ಮೇಲೆ ಪ್ರೇಮ ಬರಹ – ಫೋಟೋ ವೈರಲ್
ನಂತರ ಮಾಲೀಕರು ಥಿಯೇಟರ್ ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಘಟನೆ ಜರುಗಿದೆ ಎಂದು ಗಾಡಿ ಕಳೆದುಕೊಂಡ ಮಾಲೀಕರು, ಥಿಯೇಟರ್ನವರ ಜೊತೆ ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದರು. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ
ಕೆ.ಆರ್ ಪುರಂನ ದೇವಸಂದ್ರದಲ್ಲಿರುವ ಕೃಷ್ಣ ಥಿಯೇಟರ್ 40 ವರ್ಷದ ಹಳೆಯ ಥಿಯೇಟರ್ ಆಗಿದ್ದು, 40 ವರ್ಷದ ಹಿಂದೆ ಥಿಯೇಟರ್ ಕಾಂಪೌಂಡ್ ಕಟ್ಟಲಾಗಿದೆ. ಆದರೆ ತಡರಾತ್ರಿ ಸುರಿದ ಮಳೆಗೆ ಕಾಂಪೌಂಡ್ ಕುಸಿದು ಬೈಕ್ಗಳು ಜಖಂ ಆಗಿವೆ.