ಬೆಂಗಳೂರು: ಪ್ರೀತಿಗೆ ಕಣ್ಣಿಲ್ಲ ಅಂತಾರೆ ಆದರೆ ಕೆಲವರ ಹುಚ್ಚುತನ ಅದೆಷ್ಟರ ಮಟ್ಟಿಗೆ ಇರುತ್ತದೆ ಅಂದರೆ ಇಲ್ಲೊಬ್ಬ ಭೂಪ ಮೆಟ್ರೋ ಪ್ಲೈಓವರ್‌ನ ಮೇಲ್ಭಾಗದಲ್ಲಿ ಮೈ ಲವ್ ಅಂತಾ ಬರೆದು ಪ್ರೇಮ ನಿವೇದನೆ ಮಾಡಿಕೊಂಡಂತೆ ಕಾಣಿಸುತ್ತಿದೆ.
ಗೊರುಗುಂಟೆ ಪಾಳ್ಯದ ಮೆಟ್ರೋ ಪಿಲ್ಲರ್ ಪ್ಲೈಓವರ್‌ನ ಮೇಲ್ಭಾಗದಲ್ಲಿ ಮೈ ಲವ್ ಬರಹ ಈಗ ಮೆಟ್ರೋ ಸಿಬ್ಬಂದಿ ನಿದ್ದೆಗೆಡಿಸಿದೆ. ಜೀವದ ಹಂಗು ತೊರೆದು ಮೆಟ್ರೋ ಪ್ಲೈಓವರ್ ಮೇಲೆ ಇಷ್ಟು ಎತ್ತರಕ್ಕೆ ಏರಿ ಬರೆಯುವ ಸಾಹಸ ಮಾಡಿದ್ದು ಯಾರು ಎನ್ನುವುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ದಾರಿಯಲ್ಲಿ ಹೋಗುವ ವಾಹನ ಸವಾರರು ಮೈ ಲವ್ ಬರಹ ನೋಡಿ ತಲೆ ಕೆರೆದುಕೊಂಡು ಯಾರಪ್ಪ ಇದನ್ನು ಬರೆದವನು ಅಂತ ಅಂದುಕೊಂಡು ಸಾಗುತ್ತಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ
ಇತ್ತೀಚೆಗೆ ರಸ್ತೆ, ಮೆಟ್ಟಿಲ ತುಂಬೆಲ್ಲ ಸಾರಿ ಅಂತಾ ಕಿಡಿಗೇಡಿಯೊಬ್ಬ ಗೀಚಿ ಹೋಗಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈಗ ಮೆಟ್ರೋ ಪಿಲ್ಲರ್ ಮೇಲ್ಭಾಗದ ಈ ಬರಹ ಕೂಡ ಎಲ್ಲರನ್ನು ಆಶ್ಚರ್ಯಕ್ಕೆ ಒಳಪಡಿಸಿದೆ. ಇದನ್ನೂ ಓದಿ: ಮೋದಿ ತಾಯಿಗೆ 100ರ ಸಂಭ್ರಮ – ಶುಭಕೋರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ