ಬೆಂಗಳೂರು: ಪಶುವೈದ್ಯಕೀಯ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿರೋ ಆರೋಪದ ಮೇಲೆ ಬಂಧನವಾಗಿರುವ ಆರೋಪಿ ಬಸವರಾಜ್ ಕನ್ನಾಳೆ (Basavaraj Kannale) ಮನೆಯನ್ನ ಸಿಐಡಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಬಾಲ್ಕಿ ಮೂಲದ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆಯನ್ನ ಬಂಧನ ಮಾಡಿದ ಬಳಿಕ ಸಿಐಡಿ ಪೊಲೀಸರು ಸರ್ಚ್ ವಾರೆಂಟ್ ಪಡೆದು ಸಂಜಯ್ ನಗರದ ವಿನಾಯಕ ಲೇಔಟ್ ನಲ್ಲಿರುವ ಬಸವರಾಜ್ ಕನ್ನಾಳೆ ಮುನೆಯನ್ನ ಸರ್ಚ್ ಮಾಡಿದ್ದಾರೆ.
ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಮನೆ ಶೋಧ ನಡೆಸಿರೋ ಸಿಐಡಿ ಮನೆ ಸರ್ಚ್ ಮುಗಿದ ಬಳಿಕ ಸೀಜ್ ಮಾಡಿ ತನ್ನ ಕಂಟ್ರೋಲ್‌ಗೆ ಪಡೆದಿದೆ. ಕೆಲವು ಅಭ್ಯರ್ಥಿಗಳ ಜೊತೆ ಮಾತುಕತೆ ಆಗಿರುವ ಬಗ್ಗೆ ಸಿಐಡಿಗೆ ಮಾಹಿತಿ ಸಿಕ್ಕಿರುವ ಕಾರಣ ಬಸವರಾಜ್ ಮನೆಯಲ್ಲಿರುವ ಸಿಸಿಟಿವಿ ಡಿವಿಆರ್ ಕೂಡ ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಸಿಐಡಿ ಮುಂದಾಗಿದೆ ಎಂದು ʻಪಬ್ಲಿಕ್ ಟಿವಿʼಗೆ ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
