Connect with us

Districts

‘ಕೆಪಿಸಿಸಿ ಪಟ್ಟ ಅಲಂಕರಿಸಲು ಸಿದ್ಧ, ಆದ್ರೆ 8 ಷರತ್ತು ಒಪ್ಪಬೇಕು’ – ಡಿಕೆ ಶಿವಕುಮಾರ್

Published

on

ಬೆಂಗಳೂರು: “ನಾನು ಕೆಪಿಸಿಸಿ ಅಧ್ಯಕ್ಷ ಪಟ್ಟ ಅಲಂಕರಿಸಲು ಸಿದ್ಧ. ಆದರೆ ನನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಹುದ್ದೆ ಏರುತ್ತೇನೆ” ಎನ್ನುವ  ಬೇಡಿಕೆಯನ್ನು  ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದಾರೆ.

ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯಿಂದ ತೆರವಾದ ಹುದ್ದೆಗೆ ನಾಯಕನನ್ನು ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗುತ್ತಿದೆ. ಈ ರೇಸ್‍ನಲ್ಲಿ ಎಂಬಿ ಪಾಟೀಲ್ ಹೆಸರು ತೇಲಿಬಂದರೂ ಹೈಕಮಾಂಡ್ ಈಗ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನೇ ಆಯ್ಕೆ ಮಾಡಲು ಮುಂದಾಗಿದೆ.

ಬಹುತೇಕ ತನ್ನ ಹೆಸರು ಬಹುತೇಕ ಅಂತಿಮವಾಗುತ್ತಿದ್ದಂತೆ ಡಿಕೆಶಿವಕುಮಾರ್ ಹೈಕಮಾಂಡ್ ಮುಂದೆ 8 ಷರತ್ತುಗಳನ್ನು ಇಟ್ಟಿದ್ದಾರೆ. ಈ ಷರತ್ತುಗಳನ್ನು ಒಪ್ಪಿದರೆ ಮಾತ್ರ ನಾನು ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಏರುತ್ತೇನೆ. ಅಧ್ಯಕ್ಷನಾಗಿಯೂ ನನಗೆ ಬೇಕಾದ ನಿರ್ಧಾರ ಕೈಗೊಳ್ಳಲು ಆಗದೇ ಇದ್ದರೆ ನನಗೆ ಪಟ್ಟ ಬೇಡ ಎಂದು ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ:ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ, ಗುಂಡೂರಾವ್‍ಗೆ ಢವ-ಢವ

ಡಿಕೆಶಿ ಷರತ್ತುಗಳು:
1. ಅಧ್ಯಕ್ಷನಾಗಿ ನನಗೆ ಸಂಪೂರ್ಣ ಫ್ರೀ ಹ್ಯಾಂಡ್ ನೀಡಬೇಕು.
2. ಪದಾಧಿಕಾರಿಗಳ ಬದಲಾವಣೆ ಹಾಗೂ ನೇಮಕ ವಿಚಾರದಲ್ಲಿ ನಾನೇ ನಿರ್ಧಾರ ಕೈಗೊಳ್ಳುವಂತಿರಬೇಕು.
3. ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ನನ್ನದು. ಆದರೆ ಬೇರೆಯವರ ಹಸ್ತಕ್ಷೇಪಕ್ಕೆ ನೀವು ಮಣಿಯಬಾರದು.
4. ಪಕ್ಷವನ್ನ ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ. ಪಕ್ಷ ಅಧಿಕಾರಕ್ಕೆ ಬಂದಮೇಲೆ ಯಾವುದೇ ಗೊಂದಲಗಳು ಇರಬಾರದು. ನನ್ನನ್ನೇ ಸಿಎಂ ಮಾಡಬೇಕು.

5. ಸಹಕಾರ ಬೇಕಾದಾಗ ನಾನೇ ತಿಳಿಸುತ್ತೇನೆ. ಆಗ ಹೈಕಮಾಂಡ್ ನಾಯಕರುಗಳು ರಾಜ್ಯಕ್ಕೆ ಬಂದು ಸಹಕರಿಸಬೇಕು.
6. ಟಿಕೆಟ್ ಹಂಚಿಕೆ ಹಾಗೂ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
7. ಅಗತ್ಯ ಬಿದ್ದರೆ ಪಕ್ಷಕ್ಕೆ ಅನುಕೂಲವಾಗುವಲ್ಲಿ ಪಕ್ಷದ ಸಂಪ್ರದಾಯವನ್ನು ಮೀರಿ ತೀರ್ಮಾನ ಕೈಗೊಳ್ಳಲು ನೀವು ಒಪ್ಪಿಗೆ ನೀಡಬೇಕು.
8. ಹೊಂದಾಣಿಕೆಗೆ, ಬದಲಾವಣೆಗೆ ನಾನು ಸಿದ್ಧ. ಆದರೆ ರಾಜ್ಯ ನಾಯಕರುಗಳು ಬೇರೆ ಯಾವುದೇ ಉದ್ದೇಶದಿಂದ ಮಧ್ಯೆ ಕೈ ಆಡಿಸಿದರೆ ಅದಕ್ಕೆ ನಾನು ಒಪ್ಪುವುದಿಲ್ಲ.

Click to comment

Leave a Reply

Your email address will not be published. Required fields are marked *