ರಾಮನಗರ: ಕನಕಪುರದಲ್ಲಿ ಪ್ರತಿಯೊಂದಕ್ಕೂ ಲಂಚ ನೀಡೋ ಸ್ಥಿತಿ ಬಂದಿದೆ ಎಂದು ಜನ ಆ ಕ್ಷೇತ್ರದ ಶಾಸಕರು ಆಗಿರೋ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂದು ಕ್ಷೇತ್ರದ ರೈತರು ಮತ್ತು ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಿದ್ರು.
Advertisement
ಎಂಪಿಗೆ ಹಣ ನೀಡಬೇಕು ಇಲ್ಲ ಅಂದ್ರೆ ಬೂಟ್ ಕಾಲಿನಲ್ಲಿ ಒದೀತಾರೆ ಅಂತ ಅಧಿಕಾರಿಗಳು ಹೇಳ್ತಾರೆ ಎಂದು ರೈತರು ನೇರ ಆರೋಪ ಮಾಡಿದರು. ಆದರೆ ಎಂಪಿ ಕನಕಪುರದಲ್ಲಿ 10 ರೂ. ಹಣ ಪಡೆಯಲ್ಲ. ನಿಮ್ಮ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಮಾತನ್ನು ಆ ರೈತ ಹೇಳಿದ್ರು. ಇದಕ್ಕೆ ಮುಗುಳ್ನಗೆ ಬೀರಿದ ಡಿಕೆಶಿ, ಈ ತಾಲೂಕಿನಲ್ಲಿ ನಾನು, ಅನಿತಾ ಕುಮಾರಸ್ವಾಮಿ ಇಬ್ಬರು ಶಾಸಕರಿದ್ದೇವೆ. ನಮಗೆ ಎಷ್ಟು ಹಣ ನೀಡುತ್ತಿದ್ದೀರಾ ಹೇಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ರು. ರೀ ತಹಶೀಲ್ದಾರರೇ ಯಾವುದಕ್ಕೆ ಎಷ್ಟು ಲಂಚ ಕೊಡಬೇಕು ಅಂತ ರೇಟ್ ಫಿಕ್ಸ್ ಮಾಡಿ ಬೋರ್ಡ್ ಹಾಕಿ. ನಮಗೂ ಏನಾದ್ರೂ ಕೊಡುತ್ತಿದ್ದರೆ ಅದನ್ನೂ ಹಾಕಿ. ನಾನು ಬೆಂಗಳೂರಿನಲ್ಲಿ ಕೆಲಸ ಅಂತ ಹೋದರೆ, ಇಲ್ಲಿ ಹಿಂಗೆ ಆಗಿದೆ ಎಂದು ಬೇಸರ ಹೊರಹಾಕಿದ್ರು.
Advertisement
Advertisement
ಇದೇ ವೇಳೆ ರೆವಿನ್ಯೂ ಅಧಿಕಾರಿಗಳನ್ನ ಸಾಲಾಗಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು. ಸಚಿವ ಆರ್. ಅಶೋಕ್‍ಗೆ ಪೋಸ್ಟಿಂಗ್ಸ್‍ಗೆಂದು ಹಣ ಕೊಟ್ಟು ಬಂದಿದ್ದೇವೆ. ಅದಕ್ಕೆ ಹಣ ಪಡೆಯುತ್ತಿದ್ದೇವೆ ಅಂತಾ ಅಧಿಕಾರಿಗಳು ಹೇಳ್ತಾರೆ. ಅಲ್ಲದೇ ಅಶ್ವಥ್ ನಾರಾಯಣ್ ಗೆ ಕೊಡಬೇಕು ಅಂತಾರೆ. ಪೋಸ್ಟಿಂಗ್ಸ್ ರೇಟ್ ಜಾಸ್ತಿ ಆಗಿದೆ ಅಂತ ಜನರ ಬಳಿ ವಸೂಲಿಗೆ ಬಿದ್ರೆ ಹೇಗಪ್ಪ ಎಂದು ಎಂಎಲ್‍ಸಿ ರವಿ ಪ್ರಶ್ನಿಸಿದ್ರು. ಈ ಮೂಲಕ ಬಿಜೆಪಿಗೆ ಟಾಂಗ್ ಕೊಟ್ರು. ಇದನ್ನೂ ಓದಿ: ಬಿಎಸ್‍ವೈ ಅಂದ್ರೆ ಒಂದು ದೊಡ್ಡ ಶಕ್ತಿ, ಅವರ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ: ಬೊಮ್ಮಾಯಿ