ರಾಮನಗರ: ನಾವೆಲ್ಲರೂ ಹೆಂಗಸರು, ಸೀರೆ ಕೊಟ್ಟರೆ ಉಟ್ಕೋತ್ತೀವಿ. ಇವರಿಗೆಲ್ಲ ನಾವು ಟೆಸ್ಟ್ ಮಾಡಿಸಬೇಕು ಈಗ ಎಂದು ಹೇಳುತ್ತಾ ಕಾರ್ಯಕರ್ತರ ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೈ ತೋರಿಸಿದರು.
ಕನಕಪುರದ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೇಲೆ ಯಾರೂ ತೊಡೆತಟ್ಟಲಿಲ್ಲ. ರಾಮನಗರದಲ್ಲಿ ಯಾರಾದರೂ ಗಂಡಸರು ಇದ್ದಾರಾ ಅಂತಾ ಕೇಳಿದರು. ಸಿಎಂ, ಸಚಿವರು ಇದ್ದರು. ಅವರೇ ಯಾರು ಗಂಡಸರು ಅಂತ ಹೇಳಬೇಕು ಎಂದರು.
Advertisement
Advertisement
ಅಶ್ವಥ್ ನಾರಾಯಣ ಕರ್ನಾಟಕ ರಾಜಕಾರಣದಲ್ಲೇ ಅತ್ಯಂತ ಭ್ರಷ್ಟ ಸಚಿವ. ಅದರಲ್ಲಿ ಅನುಮಾನವೇ ಇಲ್ಲ, ಮೋಸ್ಟ್ ಕರಪ್ಟ್. ನಾನು ಬ್ರಾಹ್ಮಣನ ತರ ಇದ್ದೀನಿ, ಶುದ್ಧ ರಾಜಕಾರಣಿ ಇದೆಲ್ಲ ಯಾಕೆ ಬೇಕು. ಅವರ ಮಾತುಗಳನ್ನ ನೋಡಿದ್ರೆ ಯಾರು ಈ ರೀತಿ ಸಂಸ್ಕೃತಿ ಇರೋರು ಮಾಡಲ್ಲ. ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ, ಜಿಲ್ಲೆಯಲ್ಲಿ ನಡೆದ ಅನಾಹುತಕ್ಕೆ ಇದು ಫ್ಯಾಕ್ಟ್. ಬಿಚ್ಚುತ್ತೀನಿ ಅಂದಿದ್ದಾರೆ, ಎಲ್ಲವನ್ನು ಬಿಚ್ಚಲಿ, ಯಾರು ಬೇಡ ಅಂತಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ನನಗೆ ಏನು ಬೇಕಾದರೂ ಮಾಡಲಿ, ಎದುರಿಸಲು ಸಿದ್ಧರಾಗಿದ್ದೇವೆ. ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧರಿದ್ದೇವೆ. ಬಿಜೆಪಿಯ ಕೆಲವರು ನಮ್ಮ ಜೊತೆ ಮಾತನಾಡಿದ್ದಾರೆ. ಅದನ್ನೆಲ್ಲ ಹೇಳಲು ಆಗಲ್ಲ ನಾನು. ಸಾಮಾನ್ಯವಾಗಿ ಹತ್ತಿರ ಇರೋರೇ ಮಾಹಿತಿ ಕೊಡೋದು. ಇದೊಂದೇ ಇಲಾಖೆ ಅಲ್ಲ, ಶಿಕ್ಷಣ ಇಲಾಖೆ, ಕೆಪಿಎಸ್‍ಸಿಯಲ್ಲೂ ಅಕ್ರಮ ಆಗಿದೆ. ಇದರ ಬಗ್ಗೆ ಬೊಮ್ಮಾಯಿಯವರು ಕೇಸ್ ಯಾಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭ್ರಷ್ಟ, ಸುಲಿಗೆ ಸರ್ಕಾರಕ್ಕೆ ಜನ ಛೀ, ಥೂ ಅಂತ ಉಗಿಯುತ್ತಿದ್ದಾರೆ: ಸಿದ್ದರಾಮಯ್ಯ
ಎಸಿಬಿಗೆ ದೂರು ನೀಡಿ ಎಫ್‍ಐಆರ್ ಮಾಡಬೇಕಿತ್ತು. ವಿಚಾರಣೆ ಮಾಡಬೇಕಿತ್ತು, ಯಾಕೆ ಮಾಡಿಲ್ಲ. ಕೆಪಿಎಸ್‍ಸಿಯಯಲ್ಲಿ ಅಕ್ರಮ ಆಗಿದೆ. ಅದರ ಬಗ್ಗೆ ಬೊಮ್ಮಾಯಿ ಯಾಕೆ ಸುಮ್ಮನಿದ್ದಾರೆ. ಗೌವರ್ನರ್, ಮುಖ್ಯಕಾರ್ಯದರ್ಶಿ ಯಾಕೆ ಸುಮ್ಮನಿದ್ದಾರೆ. ನಮ್ಮ ಬಳಿ 40% ವಿಚಾರವಾಗಿ ಎಷ್ಟೋ ಡೆತ್ ನೋಟ್ ಗಳು ಬರುತ್ತಿವೆ. ಒಂದೊಂದಾಗಿಯೇ ನಾವು ತೆಗೆದುಕೊಳ್ತೇವೆ. ದೇವೇಗೌಡರು, ಕುಮಾರಸ್ವಾಮಿ ಕ್ಲೀನ್ ಮಾಡ್ತೀವಿ ಅಂತಾ ಬಂದ್ರು. ಈಗ ಅಶ್ವಥ್ ನಾರಾಯಣ ಬಂದಿದ್ದಾರೆ ಮಾಡಲಿ. ಭ್ರಷ್ಟಾಚಾರ ಬಿಜೆಪಿ ಕಾಲದಲ್ಲಿ ಪ್ರತಿ ತಾಲೂಕಿನಲ್ಲೂ ತಾಂಡವವಾಡ್ತಿದೆ ಎಂದು ತಿಳಿಸಿದರು.