ಮಂಗಳೂರು: ಕಾಂಗ್ರೆಸ್, ಜೆಡಿಎಸ್‍ನ ಒಟ್ಟು 18 ಶಾಸಕರು ಸೋಮವಾರ ಬಿಜೆಪಿ ಸೇರುತ್ತಾರೆ ಅನ್ನೋ ಸುದ್ದಿಯ ಬೆನ್ನಲ್ಲೆ ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸ್ಫೋಟಕ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 30ರಿಂದ 40 ಕೋಟಿ ರೂ. ಆಮಿಷ ಒಡ್ಡಲಾಗಿದೆ. ಬಿಜೆಪಿ ಒಡ್ಡುತ್ತಿರುವ ಇಷ್ಟೊಂದು ಮೊತ್ತದ ಹಣದ ಮೂಲ ಯಾವುದು..? ಈ ಕುದುರೆ ವ್ಯಾಪಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪಾಲುದಾರಿಕೆ ಹೊಂದಿದ್ದಾರಾ ಅನ್ನೋ ಅನುಮಾನವನ್ನು ಕೂಡ ವ್ಯಕ್ತಪಡಿಸುವ ಮೂಲಕ ಬಿಜೆಪಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ.
Advertisement
Advertisement
ಅಧಿವೇಶನಕ್ಕೆ ನಮ್ಮ ಪಕ್ಷದಿಂದ ಎಲ್ಲರೂ ಭಾಗವಹಿಸುತ್ತಾರೆ. 80 ಜನನೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಬಿಜೆಪಿಯವರು ನಿಮಗೆ ಎಷ್ಟು ಬೇಕು. ಡೆಲಿವರಿ ಇದೆ. ಬಂದು ತೆಗೆದುಕೊಂಡು ಹೋಗಿ. ಅಥವಾ ಹಣವನ್ನು ನಿಮಗೆ ಎಲ್ಲಿ ಬೇಕೋ ಅಲ್ಲಿಗೆ ಕಳುಹಿಸಿ ಕೊಡುತ್ತೇವೆ ಎಂದು ಕಾಂಗ್ರೆಸ್ ಪಕ್ಷದವರಿಗೆ ಹೇಳಿದ್ದಾರೆ ಎಂದು ನಮ್ಮ ಶಾಸಕರು ನನ್ನಲ್ಲಿ ಹೇಳಿದ್ದಾರೆ.
Advertisement
20 ಕೋಟಿ- 30 ಕೋಟಿ ಹಣದ ಆಮಿಷ ಒಡ್ಡುವ ಬಿಜೆಪಿಯವರಿಗೆ ಹಣ ಎಲ್ಲಿಂದ ಸಿಗುತ್ತದೆ. ಇದಕ್ಕೆ ಸುಮಾರು 200ರಿಂದ 300 ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ ಇವರಿಗೆ ಹಣ ಎಲ್ಲಿಂದ ಬರುತ್ತದೆ. ಸೆವೆನ್ ಸ್ಟಾರ್ ಲಕ್ಷುರಿ ಹೋಟೆಲಿನಲ್ಲಿ 10 ದಿನಗಳ ಕಾಲ 100 ಜನ ಶಾಸಕರನ್ನು ಉಳಿಸಿಕೊಂಡಿದ್ದಾರಲ್ಲ. ಅದಕ್ಕೆ ಎಷ್ಟು ಕೋಟಿ ಖರ್ಚಾಗಿರಬಹುದು ಎಂದು ಅವರು ಪ್ರಶ್ನಿಸಿದ್ರು.
Advertisement
ನಾವು ಎರಡು ದಿನ ಈಗಲ್ ಟನ್ ರೆಸಾರ್ಟ್‍ನಲ್ಲಿ ಚರ್ಚೆ ಮುಗಿಸಿಕೊಂಡು ಬಂದೆವು. ಯಾಕಂದ್ರೆ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳಿದ್ದರು. ಈ ಪರಿಸ್ಥಿತಿ ನೋಡಿಕೊಂಡು ಬಿಜೆಪಿಯವರ ಷಡ್ಯಂತರವೇನು ಎಂದು ತಿಳಿದುಕೊಳ್ಳಲು ಎರಡು ದಿನಚರ್ಚೆ ನಡೆಸಿದ್ದೆವು ಅಷ್ಟೇ. ಯಾಕಂದ್ರೆ ಒಂದು ವಾರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. 24 ಗಂಟೆಯಲ್ಲಿ ಸರ್ಕಾರ ರಚನೆಯಾಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅದರ ಅರ್ಥವೇನು ಕಟೀಲ್ ಅವರು ಕೂಡ ಕುದುರೆ ವ್ಯಾಪಾರಕ್ಕೆ ಕೈ ಹಾಕಿದ್ದಾರೆ. ಈ ಸರ್ಕಾರವನ್ನು ಅಸ್ಥಿರ ಮಾಡಬೇಕು ಎನ್ನುವ ಉದ್ದೇಶದಿಂದ ಭ್ರಷ್ಟಾಚಾರಕ್ಕೆ ಕೈ ಹಾಕಿದ್ದಾರೆ. ಮೆಜಾರಿಟಿ ಇಲ್ಲದೇ ಇದ್ದಾಗ ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಗೆ ಹೇಳಿದ್ರು ಎಂದು ಪ್ರಶ್ನಿಸಿದ್ರು.
ಒಟ್ಟಿನಲ್ಲಿ ಕಳೆದ 8 ತಿಂಗಳಿನಿಂದ ನಡೆಸುತ್ತಿರೋ ಪ್ರಕ್ರಿಯೆ ಬಿಜೆಪಿಯವರ ನೈತಿಕತೆಯನ್ನು ನಗ್ನ ಮಾಡಿದೆ. ಇವರಂತಹ ಸುಳ್ಳರು, ಮೋಸಗಾರರು ಈ ದೇಶದಲ್ಲಿ ಬೇರೆ ಯಾರೂ ಇಲ್ಲ. ಇವರೇ ಅದಕ್ಕೆ ನೈಜ ಉದಾಹರಣೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ರು.
ಒಟ್ಟಿನಲ್ಲಿ `ಆಪರೇಷನ್ ಕಮಲ’ದ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲೇ ಗೊಂದಲವಿದೆ. ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಅಂತಿದ್ರೆ, ಆಪರೇಷನ್ ಕಮಲ ಕೇವಲ ಭ್ರಮೆ ಎಂದು ಸಮನ್ವಯ ಅಧ್ಯಕ್ಷ ಸಿದ್ದರಾಮಯ್ಯ ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv