– ಗೆಲುವು ಸಾಧಿಸಿದ ಬಿಜೆಪಿಗೆ ಧನ್ಯವಾದ
ಬೆಂಗಳೂರು: ಉತ್ತರ ಪ್ರದೇಶದ ಫಲಿತಾಂಶಕ್ಕೂ ರಾಜ್ಯದ ಚುನಾವಣೆಗೆ ಸಂಬಂಧ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಯೊಂದು ರಾಜ್ಯದಲ್ಲಿ ಒಂದೊಂದು ವಿಚಾರದ ಮೇಲೆ ಚುನಾವಣೆಗಳು ನಡೆಯುತ್ತದೆ. ಎಲ್ಲಾ ಚುನಾವಣೆಗಳು ಒಂದೇ ತಕ್ಕಡಿಯಲ್ಲಿ ಹಾಕೋದಕ್ಕೆ ಆಗಲ್ಲ. ಇಲ್ಲಿ ನಮ್ಮ ಸರ್ಕಾರ ಇದೆ. ನಮ್ಮ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಈ ಒಂದು ಆಧಾರದ ಮೇಲೆ ಮುಂದಿನ ಚುನಾವಣೆ ನಡೆಯುತ್ತೆ. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
Advertisement
ನಿರೀಕ್ಷೆ ಇರಲಿಲ್ಲ: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸುತ್ತೆ ಅಂತಾ ನಿರೀಕ್ಷಿಸರಲಿಲ್ಲ. ಕಾಂಗ್ರೆಸ್ ಇನ್ನೂ ಫೈಟ್ ನೀಡುವ ನಿರೀಕ್ಷೆ ಇತ್ತು. ಗೆಲುವು ಸಾಧಿಸಿದ ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇವೆ. ಜನಾದೇಶವನ್ನು ಒಪ್ಪಿಕೊಳ್ಳಬೇಕಾಗುತ್ತೆ ಅಂತಾ ಗುಂಡೂರಾವ್ ನುಡಿದ್ರು.
Advertisement
ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ: ಪಂಜಾಬ್ ನಲ್ಲಿ ಕಾಂಗ್ರೆಸ್ ಗೆದ್ದಿದೆ. ಎರಡು ರಾಜ್ಯಗಳಲ್ಲಿ ಅತಂತ್ರವಾಗಿದೆ. ಆದ್ರೆ ಉತ್ತರಪ್ರದೇಶದಲ್ಲಿ ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಒಟ್ಟಿನಲ್ಲಿ ಜನರು ಕೊಟ್ಟ ತೀರ್ಮಾನವನ್ನು ಸ್ವಾಗತ ಮಾಡುತ್ತೇವೆ. ಈ ಫಲಿತಾಂಶ ಯಾಕೆ ಬಂದಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಗೋವಾದಲ್ಲಿ ನಾವು ಅಧಿಕಾರ ಹಿಡಿಯುತ್ತೇವೆ. ಉತ್ತರಪ್ರದೇಶದಲ್ಲಿ ಜನರು ಪ್ರಧಾನಿಮೋದಿ ಮೇಲೆ ವಿಶ್ವಾಸ ಇಟ್ಟು ಮತದಾನ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಪೈಪೋಟಿ ಇರಬೇಕು. ಪಕ್ಷದ ಹಿರಿಯ ನಾಯಕರು ಈ ಫಲಿತಾಂಶದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದ್ರು.
Advertisement
ಮುಂದಿನ ಚುನಾವಣೆಗೆ ರಾಜಕೀಯ ತಂತ್ರ: ಉಪ ಚುನಾವಣೆಗೆ ಕಾಂಗ್ರೆಸ್ ಎಲ್ಲ ತಯಾರಿ ನಡೆಸಿದೆ. ಎರಡೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಭಾನುವಾರ ಸಿಎಂ ನೇತೃತ್ವದಲ್ಲಿ ಸಭೆ ಕರೆದಿದ್ದೇವೆ. ಮುಂದಿನ ಚುನಾವಣೆಗೂ ರಾಜಕೀಯ ತಂತ್ರಗಳನ್ನು ಮಾಡ್ತಿದ್ದೇವೆ ಅಂತಾ ಗುಂಡೂರಾವ್ ಹೇಳಿದ್ರು.