ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

Public TV
2 Min Read
Kovid Kapoor

ಬೆಂಗಳೂರು: ಕೋವಿದ್ ಹೆಸರು ಕೇಳಿದರೆ ಇಡೀ ಜಗತ್ತು ಬೆಚ್ಚಿಬೀಳುತ್ತದೆ. ಅಂಥದ್ದರಲ್ಲಿ ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ 31 ವರ್ಷಗಳ ಹಿಂದೆಯೇ ಕೋವಿದ್ ಕಪೂರ್ ಎಂದು ಹೆಸರಿಡಲಾಗಿತ್ತು. ಇದೀಗ ಈ ವಿಚಾರ ಭಾರೀ ಸುದ್ದಿಯಲ್ಲಿದೆ.

2019ರಲ್ಲಿ ಈ ಕೋವಿಡ್- 19 ಸಾಂಕ್ರಾಮಿಕ ಆರಂಭಕ್ಕೂ ಮೊದಲು ಹೆಸರನ್ನು ಕೇಳಿ ಅಚ್ಚರಿಪಡುತ್ತಿದ್ದರು. ಕೊರೊನಾ ಸಾಂಕ್ರಾಮಿಕದ ಹೆಸರನ್ನು ವ್ಯಕ್ತಿಗೆ ಇಟ್ಟಿರುವುದನ್ನು ಕೇಳಿ ಗೊಂದಲಕ್ಕೆ ಒಳಗಾಗುತ್ತಾರೆ, ನಂತರ ನಗಲು ಆರಂಭಿಸುತ್ತಿದ್ದಾರೆ. ಬೆಂಗಳೂರಿಂದ ಶ್ರೀಲಂಕಾವರೆಗೆ ಕೋವಿದ್ ಕಪೂರ್ ಅವರ ಹೆಸರು ಗೊಂದಲ ಉಂಟು ಮಾಡಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯೂ ಈ ಹೆಸರು ಕೇಳಿ ನಗುತ್ತಿದ್ದಾರೆ.

ಟ್ವೀಟ್‍ರ್‍ನಲ್ಲಿ ಏನಿದೆ?:
ಹಾಲಿಡಿಫೈ ಸಂಸ್ಥಾಪಕ ಆಗಿರುವ ಕೋವಿದ್ ಕಪೂರ್ ಅವರು ಈ ವಿಚಾರವಾಗಿ ಸ್ಪಷ್ಟನೇ ಕೊಟ್ಟಿದ್ದಾರೆ. ನನ್ನ ಹೆಸರು ಕೋವಿದ್ ಕಪೂರ್, ನಾನು ವೈರಸ್ ಅಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

ವಾಸ್ತವವಾಗಿ ಕೋವಿದ್ ಎನ್ನುವುದು ಹನುಮಾನ್ ಚಾಲೀಸ್‍ನಲ್ಲಿರುವ ಪದವಾಗಿದೆ. ವಿದ್ವಾಂಸ, ಎಲ್ಲವನ್ನೂ ಬಲ್ಲವನು ಎನ್ನುವ ಅರ್ಥವನ್ನು ನೀಡುತ್ತದೆ. ಆದರೆ ಸಾಂಕ್ರಾಮಿಕ ನಂತರ ಅದರ ಅರ್ಥವೇ ಬದಲಾಗಿದೆ ಎಂದು ಕೋವಿದ್ ಕಪೂರ್ ಹೇಳಿದ್ದಾರೆ. ಇದನ್ನೂ ಓದಿ:  ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡ್ತಿದ್ದಾಕೆ ಆಸ್ಪತ್ರೆಗೆ ದಾಖಲು

Share This Article