Cinema
ಇಬ್ಬರ ಅಲ್ಲ ಒಬ್ಬನೇ- ಕೋಟಿಗೊಬ್ಬ ಟೀಸರ್ ಝಲಕ್‍ನಲ್ಲಿ ಕಿಚ್ಚ ಕಮಾಲ್

ಬೆಂಗಳೂರು: ಚಂದನವನದ ಬಹುನೀರಿಕ್ಷಿತ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಕಿಚ್ಚನ್ ಆ್ಯಕ್ಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಆರಂಭದಲ್ಲಿಯೇ ನಟ ರವಿಶಂಕರ್ ಪೊಲೀಸರ ಮುಂದೆ, ಸರ್ ಇಬ್ಬರ ಅಲ್ಲ ಅವನು ಒಬ್ಬನೇ ಎಂದು ಕಿಚ್ಚ ಸುದೀಪ್ ಪಾತ್ರವನ್ನ ವಿಶ್ಲೇಷಣೆ ಮಾಡ್ತಾ ಹೋಗ್ತಾರೆ. ಲೋಕಲ್ ನಲ್ಲಿ ಹೊಡೆದಾಗಲೇ ಹೇಳಿದ್ರೆ ಯಾರು ಕೇಳಲಿಲ್ಲ. ಈಗ ಅವನು ಇಂಟರ್ ನ್ಯಾಷನಲ್ ಕಿಲಾಡಿ. ಅವನ ಟ್ರಿಕ್ಸ್ ನನಗೆ ಗೊತ್ತು. ನೀವು ಅವನನ್ನ ಬಿಟ್ಟರೆ ಮುಂದೆ ಯಾರು ಹಿಡಿಯೋದಕ್ಕೆ ಸಾಧ್ಯನೇ ಇಲ್ಲ ಎಂದು ಹೇಳುವ ದೃಶ್ಯಗಳನ್ನು ಟೀಸರ್ ನಲ್ಲಿ ನೋಡಬಹುದಾಗಿದೆ.
ರವಿಶಂಕರ್ ಹೇಳುತ್ತಿದ್ದಂತೆ ಮಧ್ಯೆ ಕಿಚ್ಚನ ಮಾಸ್ ಲುಕ್ ನೋಡುಗರನ್ನ ಸೆಳೆಯುತ್ತಿದೆ. ಟೀಸರ್ ನಲ್ಲಿ ಕಿಚ್ಚನ್ ಡೈಲಾಗ್ ಇಲ್ಲದಿದ್ದರೂ, ಫೈಟಿಂಗ್ ದೃಶ್ಯಗಳು ಮಾಸ್ ಆಡಿಯನ್ಸ್ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ ಎಂಬ ಭರವಸೆಯನ್ನು ಮೂಡಿಸಿದೆ. ಈ ಮೋಷನ್ ಪೋಸ್ಟರ್ ನಲ್ಲಿ ಕನ್ನಡಕದ ಲುಕ್ ಗೆ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಮೊದಲ ಬಾರಿಗೆ ಗಾಂಧಿನಗರಕ್ಕೆ ಬಂದಿರೋ ಅಫ್ತಾಬ್ ಶಿವದಾಸನಿ ಪಾತ್ರವನ್ನು ಟೀಸರ್ ನಲ್ಲಿ ಪರಿಚಯಿಸಲಾಗಿದೆ.
ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ಕೋಟಿಗೊಬ್ಬ-3 ಸಿನಿಮಾ ತಂಡ ಕಿಚ್ಚನ ಅಭಿಮಾನಿಗಳಿಗೆ ಟೀಸರ್ ರಿಲೀಸ್ ಮಾಡುವ ಮೂಲಕ ಹಬ್ಬದ ಗಿಫ್ಟ್ ನೀಡಿದೆ.
