ರಾಮನಗರ: ಮಂಜುನಾಥ್‌ಗೆ (Kothur Manjunath) ಸೈನ್ಯದ ಬಗ್ಗೆ ವಿಶ್ವಾಸ ಇದೆ. ಸೈನ್ಯಕ್ಕೆ ಇನ್ನೂ ಫ್ರೀಹ್ಯಾಂಡ್ ಕೊಟ್ಟಿದ್ರೆ ಪಾಕಿಸ್ತಾನಕ್ಕೆ ಮತ್ತಷ್ಟು ಬುದ್ದಿ ಕಲಿಸಬಹುದಿತ್ತು ಎನ್ನುವುದು ಅವರ ಅಭಿಪ್ರಾಯ. ಅವರು ಬಿಜೆಪಿ (BJP) ನಾಯಕರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಹೊರತು ಸೈನ್ಯದ ಬಗ್ಗೆ ಅಲ್ಲ ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ಆಪರೇಷನ್ ಸಿಂಧೂರ (Operation Sindoor) ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ ವಿಚಾರದ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಕೊತ್ತೂರು ಮಂಜುನಾಥ್ ಪಕ್ಕಾ ದೇಶಾಭಿಮಾನಿ. ಸೈನ್ಯದ ಬಗ್ಗೆ ಅವರು ತಪ್ಪು ಮಾತನಾಡಿಲ್ಲ. ಸೈನಿಕರ ಬಗ್ಗೆ ಕಾಂಗ್ರೆಸ್ ಯಾವತ್ತೂ ಅಪಮಾನ ಮಾಡಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ಹೋರಾಟ ಮಾಡಿದ ಪಕ್ಷ. ಬಿಜೆಪಿಯವರು ಬೇಕಾದರೆ ಸೈನಿಕರಿಗೆ ಅಪಮಾನ ಮಾಡಬಹುದು ಆದರೆ ಕಾಂಗ್ರೆಸ್ ಮಾಡಲ್ಲ. ಸೇನಾ ಮುಖ್ಯಸ್ಥರು ಹೇಳಿರೋದನ್ನ ನಾವು ನಂಬುತ್ತೇವೆ ಹೊರತು ಬಿಜೆಪಿಗರ ಮಾತು ನಂಬಲ್ಲ ಎಂದು ಕೊತ್ತೂರು ಮಂಜುನಾಥ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಪಾಕ್ ಏಜೆಂಟರ ರೀತಿ ಕಾಂಗ್ರೆಸ್ ನಾಯಕರು ಮಾತಾಡ್ತಿದ್ದಾರೆ: ರವಿಕುಮಾರ್ ಕಿಡಿ
ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಇಂದು ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರು ಎಲ್ಲಾ ಸ್ಥಾನಕ್ಕೂ ಅರ್ಹವಾಗಿದ್ದಾರೆ. ಲೋಕಸಭಾ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಬಯಸಿದರೆ ಯಾವ ಸ್ಥಾನ ಬೇಕಾದರೂ ಅವರಿಗೆ ಸಿಗುತ್ತಿತ್ತು. ಆದರೆ ಅವರು ಯಾವ ಸ್ಥಾನವನ್ನೂ ಕೇಳಿರಲಿಲ್ಲ. ಈಗ ಬಮೂಲ್‌ಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ವಿರುದ್ಧ ‘ಬ್ರಹ್ಮೋಸ್’ ಪರಾಕ್ರಮ – ಬ್ರಹ್ಮೋಸ್ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ