ಕೋಲಾರ: ಆಪರೇಷನ್ ಸಿಂಧೂರದ(Operation Sindoor) ಹಾಗೂ ಸೇನೆ ಬಗ್ಗೆ ಹಗುರವಾಗಿ ಮಾತನಾಡಿದಲ್ಲ. ಆಪರೇಷನ್ ಸಿಂಧೂರ ಯಾರಿಗೂ ಸಮಾಧಾನ ತಂದಿಲ್ಲ ಎಂದು ಹೇಳಿದ್ದು ಎಂದು ಶಾಸಕ ಕೊತ್ತೂರು ಮಂಜುನಾಥ್(Kothur Manjunath) ಸ್ಪಷ್ಟನೆ ನೀಡಿದರು.
ಕೋಲಾರದಲ್ಲಿ(Kolar) ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಾರ್ವಜನಿಕರು ಸೇರಿ ಬಿಜೆಪಿ ನಾಯಕರಿಗೂ ಇದು ಸಮಧಾನ ಇಲ್ಲ. ಸಾರ್ವಜನಿಕರ ಮುಂದೆಯೇ ಉಗ್ರರನ್ನ ನೆಲಸಮ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಎಂದರು. ಇದನ್ನೂ ಓದಿ: ಇಡೀ ದೇಶ, ಸೇನೆ, ಸೈನಿಕರು ಮೋದಿ ಪಾದಗಳಿಗೆ ನಮಸ್ಕರಿಸುತ್ತಾರೆ: ಡಿಸಿಎಂ ವಿವಾದಾತ್ಮಕ ಹೇಳಿಕೆ
ಪಹಲ್ಗಾಮ್‌ಗೆ ಬಂದು ನಮ್ಮ ಹೆಣ್ಣುಮಕ್ಕಳ ಮುಂದೆ ದಾಳಿ ಮಾಡ್ತಾರೆ ಎಂದರೆ ಹೇಗೆ. ನಮ್ಮ ಸೇನೆ ಬಲಿಷ್ಟವಾಗಿದೆ ಎಂಬುದು ಆಪರೇಷನ್ ಸಿಂಧೂರದಿಂದ ತಿಳಿದಿದೆ. ಇಂತಹ ಶಕ್ತಿವಂತ ದೇಶದ ಮೇಲೆ ಪದೇಪದೇ ದಾಳಿಗಳಾಗುತ್ತವೆ ಎಂದರೆ ಅದು ಹೇಗೆ ಸಾಧ್ಯ. ಅದಕ್ಕೆ ಸೇನೆಗೆ ಫ್ರೀ ಹ್ಯಾಂಡ್ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಟರ್ಕಿಗೆ ಬೆಂಗಳೂರು ಶಾಕ್ – ಸೆಲೆಬಿ ಏವಿಯೇಷನ್ ಏರ್‌ಪೋರ್ಟ್ ಸೇವೆ ಸ್ಥಗಿತ
ಪಹಲ್ಗಾಮ್ ದಾಳಿಗೆ(Pahalgam Attack) ಕಾರಣರಾದ ಉಗ್ರಗಾಮಿಗಳನ್ನ ಹೊಡೆಯಬೇಕು. ಇಲ್ಲಿರುವ ಉಗ್ರರನ್ನ ಮೊದಲಿಗೆ ಹೊಡೆಯಬೇಕು. ಆದರೆ ಎಲ್ಲೋ ಹೊಡೆದಿದ್ದೇವೆ ಅನ್ನೋದೆ ನಮಗೆ ಬೇಸರ. ನಮ್ಮ ನಿರೀಕ್ಷೆ ಹುಸಿಯಾಗಿದೆ. ಮತ್ತಷ್ಟು ದಾಳಿಯ ನಿರೀಕ್ಷೆ ಇತ್ತು ಎಂದರು.