ಅರ್ಜುನ ಆನೆಗೆ 64 ವರ್ಷ.. ಕಾಡಾನೆ ಸೆರೆಗೆ ಯಾಕೆ ಬಳಸಿದ್ರು: ಸರ್ಕಾರಕ್ಕೆ ಕೋಟಾ ಪ್ರಶ್ನೆ

Public TV
1 Min Read
kota srinivas poojary

ಬೆಳಗಾವಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಖ್ಯಾತಿಯ ಅರ್ಜುನ (Arjuna Elephant) ಆನೆ ಬಲಿಯಾಗಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojari) ಗರಂ ಆಗಿದ್ದಾರೆ.

ಪರಿಷತ್‌ ಕಲಾಪದ ವೇಳೆ ಮಾತನಾಡಿದ ಅವರು, 60 ವರ್ಷ ಮೀರಿದ ಅನೆಯನ್ನ ಕಾರ್ಯಾಚರಣೆಗೆ ಬಳಕೆ ಮಾಡಬಾರದು ಅಂತ ನಿಯಮ ಇತ್ತು. ಈಗ ಅರ್ಜುನ ಆನೆಗೆ 64 ವರ್ಷ. ಕಾಡಾನೆ ಸೆರೆ ಹಿಡಿಯಲು ಯಾಕೆ ಉಪಯೋಗ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

Captain Elephant Arjuna

ಇದೊಂದು ಆತಂಕದ ವಿಚಾರ. ಸರ್ಕಾರ ಅರ್ಜುನ ಸಾವಿನ ಬಗ್ಗೆ ತನಿಖೆ ಮಾಡಬೇಕು. ಅರವಳಿಕೆ ಪುಂಡಾನೆಗೆ ಬದಲು ಅರ್ಜುನಿಗೆ ಬಿತ್ತು ಅಂತ ಆರೋಪ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆಗೆ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದ ಅರ್ಜುನ ಆನೆ ಮೃತಪಟ್ಟಿತು. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

Captain Elephant Arjuna killer

ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಅರ್ಜುನ ಆನೆ ಸಾವಿನ ಬಗ್ಗೆ ಸ್ಥಳದಲ್ಲೇ ಇದ್ದ ಮಾವುತರು ಮತ್ತು ಕಾವಾಡಿಗರು ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರವಳಿಕೆ ಕಾಡಾನೆಗೆ ತಾಗುವ ಬದಲು ಅರ್ಜುನನಿಗೆ ತುಗಲಿತ್ತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

Share This Article