– ಬಾಡಿ ವಾರೆಂಟ್ ನೀಡುವಂತೆ ಬೆಂಗಳೂರು ಕೋರ್ಟ್ ಮೊರೆ
ಉಡುಪಿ: ನಕಲಿ ನಾಯಕರನ್ನು ಸೃಷ್ಟಿಸಿ, ಕೋಟಿ ಕೋಟಿ ಲೂಟಿ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ. ಚೈತ್ರಾ ಕುಂದಾಪುರ (Chaitra Kundapura) ಕಂಪ್ಲೀಟ್ ಗ್ಯಾಂಗ್ ಕಸ್ಟಡಿಯಲ್ಲಿದ್ದು ಮೋಸದ ಕಥೆಯನ್ನು ಬಿಚ್ಚಿಡುತ್ತಿದೆ. ಈ ನಡುವೆ ಉಡುಪಿ (Udupi) ಜಿಲ್ಲಾ ನ್ಯಾಯಾಲಯದ ಮೂಲಕ ಬೆಂಗಳೂರು ಕೋರ್ಟಿಗೆ ಮನವಿ ರವಾನೆಯಾಗಿದೆ.
ಚೈತ್ರಾ ಮತ್ತು ಲೂಟಿ ಗ್ಯಾಂಗ್ ಅಂದರ್ ಆಗಿದೆ. ಒಂದೂವರೆ ಕೋಟಿ ರೂಪಾಯಿ ಅಬೇಸ್ ಮಾಡಿದ್ದ ಹಾಲಾಶ್ರೀ ಸ್ವಾಮೀಜಿ ಕೂಡ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಪೆÇಲೀಸರ ತನಿಖೆಯಲ್ಲಿ ಹಣ ಪೀಕಿಸುವ ಸಂಪೂರ್ಣ ಕಥೆ ಬಯಲಾಗಲಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಪೊಲೀಸ್ ಠಾಣೆಯಲ್ಲಿ (Kota Police Station) ಚೈತ್ರಾ ಮೇಲೆ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ
ಹಲವು ವರ್ಷಗಳ ಹಿಂದಿನ ಗೆಳೆಯ ಸುದೀನ್ ಕೋಡಿ (Sudeen Kodi) ತನಗಾದ ಮೋಸಕ್ಕೆ ನ್ಯಾಯ ಕೊಡಿಸಿ ಎಂದು ಠಾಣೆಯ ಮೆಟ್ಟಿಲು ಹತ್ತಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಮುಂದಾಗಿರೋ ಉಡುಪಿ ಕೋಟ ಠಾಣೆಯ ಪೊಲೀಸರು ಚೈತ್ರಾಳನ್ನ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅದಕ್ಕಾಗಿ ಬಾಡಿ ವಾರೆಂಟ್ ನೀಡುವಂತೆ ಬೆಂಗಳೂರು 1st ACMM ಕೋರ್ಟ್‍ಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಮೂಲಕ ಮನವಿ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ
2018 ರಿಂದ 2023ರ ವರೆಗೆ ಹಂತ ಹಂತವಾಗಿ 5 ಲಕ್ಷ ರೂಪಾಯಿ ಚೈತ್ರಾ ಕುಂದಾಪುರ, ಸುದೀನ್ ಅವರಿಂದ ಪಡೆದುಕೊಂಡಿದ್ದರು. ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ ಮೋಸ ಮಾಡಿದ್ದರು. ಈ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಚೈತ್ರಾ ವಿಚಾರಣೆ ಮಾಡಬೇಕಾಗಿದೆ. ಸುದೀನ್ ದೂರಿನ ಹಿನ್ನೆಲೆ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಮೂಲಕ ಚೈತ್ರಾ ವಿಚಾರಣೆಗೆ ಉಡುಪಿ ಪೊಲೀಸರು ಮನವಿ ಮಾಡಿದ್ದಾರೆ.
ಸಿಸಿಬಿ ವಿಚಾರಣೆ ಮುಗಿದ ಬಳಿಕ ಬಾಡಿವಾರೆಂಟ್ ಪಡೆಯುವ ಪ್ರಕ್ರಿಯೆ ಶುರು ಆಗಲಿದೆ. ಅದಕ್ಕೂ ಮುನ್ನ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ ತಾಲೂಕಿನಲ್ಲಿ ಸಹಜ ಪಕ್ರಿಯೆ ನಡೆಯಬೇಕಿದೆ. ಮತ್ತೆರಡು ಪ್ರಕರಣ ಬಿದ್ದರೂ ಆಶ್ಚರ್ಯ ಇಲ್ಲ ಎಂದು ಚೈತ್ರಾ ಕುಂದಾಪುರ ಆಪ್ತರಾಗಿದ್ದವರು ಮಾಹಿತಿ ನೀಡಿದ್ದಾರೆ.
Web Stories