ಕೊಪ್ಪಳ: ಶ್ರೀರಾಮಚಂದ್ರನ ಜನ್ಮ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮಚಂದ್ರನ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ರಾಮನ ಭಕ್ತನಾಗಿರುವ ಹನುಮನ ನಾಡಿನಿಂದ ಶಿಲ್ಪಿ ಓರ್ವ ಹೋಗುವ ಮೂಲಕ ದೇವಸ್ಥಾನ ನಿರ್ಮಾಣದ ಕೆತ್ತನೆಯ ಕೆಲಸದಲ್ಲಿ ನಿರತರಾಗಿ ವಾಪಸ್ಸು ಬಂದಿದ್ದಾರೆ.
Advertisement
ಕೊಪ್ಪಳದ (Koppal) ಗಂಗಾವತಿ (Gangavati) ನಗರದ 24ನೇ ವಾರ್ಡಿನ ಲಕ್ಷ್ಮಿಕ್ಯಾಂಪ್ ನಿವಾಸಿಯಾಗಿರುವ ಶಿಲ್ಪಿ ಪ್ರಶಾಂತ್ ಸೋನಾರ್ ಎನ್ನುವವರು ಸರಿಸುಮಾರು 45 ದಿನಗಳ ಕಾಲ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ನಿರ್ಮಾಣ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಚಿತ್ರಗಳನ್ನು ಬಿಡಿಸುವ, ಶಿಲ್ಪಗಳನ್ನು ಕೆತ್ತುವ ಆಸಕ್ತಿಯನ್ನು ಹೊಂದಿದ್ದ ಪ್ರಶಾಂತ್ ಅವರು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ನಂತರ ಚೆನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದ ಶ್ರೀಗಂಗರಸ ಶಿಲ್ಪಕಲಾ ಶಿಕ್ಷಣ ಕೇಂದ್ರದಲ್ಲಿ ಸುಮಾರು 5 ವರ್ಷಗಳ ಕಾಲ ಶಿಲ್ಪಕಲೆಯ ಕುರಿತು ಶಿಕ್ಷಣ ಪಡೆದುಕೊಂಡು, ಸುಮಾರು ಕಡೆಗಳಲ್ಲಿ ಶಿಲ್ಪ ಕಲೆಗಳ, ದೇವರ ಮೂರ್ತಿಗಳ ಕೆತ್ತನೆಯ ಕೆಲಸ ಮಾಡಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ, ಧಾರವಾಡದ ಮುಖ್ಯಶಿಲ್ಪಿಯಾಗಿರುವ ರವೀಂದ್ರ ಆಚಾರ್ ಅವರ ಸಂದೇಶದ ಮೇರೆಗೆ ಕರ್ನಾಟಕದಿಂದ 4 ಜನ ಶಿಲ್ಪಿಗಳು ಅಯೋಧ್ಯೆಯನ್ನು ತಲುಪಿದ್ದರು. ಅದರಲ್ಲಿ ಪ್ರಶಾಂತ್ ಸೋನಾರ್ ಕೂಡ ಒಬ್ಬರಾಗಿದ್ದಾರೆ. ಇವರನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಸಂವಿಧಾನದ ಮೂಲಭೂತ ಹಕ್ಕುಗಳ ಭಾಗದಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾದೇವಿಯ ಚಿತ್ರಗಳಿವೆ: ಜಗದೀಪ್ ಧನಕರ್
Advertisement
Advertisement
Advertisement
ಮಂದಿರ ಗರ್ಭ ಗುಡಿಯಲ್ಲಿ ಕೆಲಸ: ರಾಜ್ಯದಲ್ಲಿ ಅಯೋಧ್ಯೆಗೆ ಹೋಗಿರುವ 4 ಜನ ಶಿಲ್ಪಿಗಳಲ್ಲಿ ಪ್ರಶಾಂತ್ ಸೋನಾರ್ ಅವರಿಗೆ ರಾಮಮಂದಿರದ ಗರ್ಭ ಗುಡಿಯಲ್ಲಿ ಕೆತ್ತನೆ ಮಾಡುವ ಕೆಲಸ ನೀಡಲಾಗಿತ್ತು. ಸುಮಾರು 45 ದಿನಗಳ ಕಾಲ ರಾಮಮಂದಿರ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದೇವಸ್ಥಾನದ ಗರ್ಭಗುಡಿ ಬಳಿಯ ಕಂಬಗಳಲ್ಲಿ ಬಳ್ಳಿ ಕೆತ್ತನೆ, ಕಂಬಗಳಲ್ಲಿ ವಿಗ್ರಹಗಳ ಕೆತ್ತನೆ ಕೆಲಸವನ್ನು ಮಾಡಲಾಗಿದೆ. ಇವರಿಗೆ ನೀಡಿದ ಕೆಲಸ ಪೂರ್ಣಗೊಳಿಸಿ, ವಾಪಸ್ಸು ಬಂದಿದ್ದು, ದೇವಸ್ಥಾನ ಉದ್ಘಾಟನೆಯ ನಂತರವೂ ಸಹ ಇನ್ನೂ ದೇವಸ್ಥಾನ ಕೆಲಸ ನಡೆಯಲಿದೆ. ಮತ್ತೆ ಆಹ್ವಾನ ಬಂದರೆ ಮತ್ತೆ ಹೋಗಿ ಶ್ರೀರಾಮಚಂದ್ರನ ಸೇವೆಯನ್ನು ಮಾಡುವೆ ಎನ್ನುವ ಆಶಯವನ್ನು ಪ್ರಶಾಂತ್ ಸೋನಾರ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ
ಫುಲ್ ಟೈಟ್ ಸೆಕ್ಯೂರಿಟಿ:
ಅಯೋಧ್ಯೆಯ ರಾಮಮಂದಿರದಲ್ಲಿನ ಹೊರಾಂಗಣದ ಸ್ತಂಭ, ಶಿಲಾ ಕೃತಿಗಳ ಕೆತ್ತನೆ ಕಾರ್ಯದಲ್ಲಿ ಸುಮಾರು 45 ದಿನಗಳನ್ನು ಕಳೆದಿರುವ ಗಂಗಾವತಿಯ ಶಿಲ್ಪ ಕಲಾವಿದ ಪ್ರಶಾಂತ್ ಸೋನಾರ್ ಅದೊಂದು ಅದ್ಭುತ ಅನುಭವ ಎಂದು ಹೇಳಿಕೊಳ್ಳುತ್ತಾರೆ. ಬೆಳಗ್ಗೆ ಎಂಟು ಗಂಟೆಗೆ ಶುರುವಾಗುತ್ತಿದ್ದ ಕೆಲಸ, ಸಂಜೆ ಆರು ಗಂಟೆಗೆ ಮುಗಿಯುತ್ತಿತ್ತು. ಅತ್ಯಂತ ಟೈಟ್ ಸೆಕ್ಯೂರಿಟಿಯಲ್ಲಿ ನಾವು ಕೆಲಸ ಮಾಡಬೇಕಿತ್ತು. ಮುಖ್ಯವಾಗಿ ನಮಗೆ ಕೊಟ್ಟ ಕೆಲಸವಷ್ಟೆ ಮಾಡಬೇಕಿತ್ತು. ನಮ್ಮ ತಂಡದ ಸದಸ್ಯರನ್ನು ಹೊರತು ಪಡಿಸಿದರೆ ಬೇರೆ ಗುಂಪಿನೊಂದಿಗೆ ಪರಸ್ಪರ ಮಾತುಕತೆಗೆ ಆಸ್ಪದ ಇರುತ್ತಿರಲಿಲ್ಲ. ಮುಖ್ಯವಾಗಿ ನಾವು ಮಾಡುವ ಕೆಲಸದ ತಾಣಕ್ಕೆ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ. ಅನಗತ್ಯ ಯಾರೊಂದಿಗೂ ಮಾತನಾಡುವಂತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯಸಭೆಗೆ ಅವಕಾಶ ನೀಡಿ, ಲೋಕಸಭೆಯಲ್ಲಿ 3 ಕ್ಷೇತ್ರ ಗೆಲ್ಲಿಸುವೆ: ಅಮಿತ್ ಶಾ ಮುಂದೆ ಸೋಮಣ್ಣ ಮನವಿ