ಕೊಪ್ಪಳ: ಪ್ರಚಾರಕ್ಕೆ ತೆರಳಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆಯಲು ಮಾಡಲು ಮುಂದಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಕುಷ್ಟಗಿಯ 20ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಪ್ರಚಾಕ್ಕೆ ತೆರಳಿದ್ದ ಕಾಂಗ್ರೆಸ್ ಅಭ್ಯರ್ಥಿ ದ್ಯಾಮಣ್ಣ ಡೊಳ್ಳಿನ್ ಗೆ ಮಹಿಳೆ ಚಪ್ಪಲಿಯಿಂದ ಹೊಡೆಯಲು ಮುಂದಾಗಿದಾರೆ. ತಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನ ನೀಡಿಲ್ಲವೆಂದು ಮಹಿಳೆಯ ಆರೋಪವಾಗಿದೆ. ಮಹಿಳೆ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಬರುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರು ತಡೆಯಲು ಮುಂದಾದ್ರು. ಈ ವೇಳೆ ಮಹಿಳೆ ದ್ಯಾಮಣ್ಣ ಡೊಳ್ಳಿನ ನಮಗೆ ಮೋಸ ಮಾಡಿದ್ದಾನೆ ಎಂದು ಹೇಳುತ್ತಾ ಹಲ್ಲೆಗೆ ಮುಂದಾದರು. ಕೂಡಲೇ ಸ್ಥಳದಲ್ಲಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಆಕೆಯನ್ನು ತಡೆದಿದ್ದಾರೆ. ಇದನ್ನೂ ಓದಿ: ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್
Advertisement
ಬಿಜೆಪಿ ಅಭ್ಯರ್ಥಿ ಕಲ್ಲೇಶ್ ತಾಳದ್ ನನ್ನ ಮೇಲೆ ಹಲ್ಲೆಗೆ ವ್ಯವಸ್ಥಿತವಾದ ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಚಾರದ ವೇಳೆ ಪೊಲೀಸ್ ಭದ್ರತೆ ನಿಯೋಜಿಸಬೇಕೆಂದ ಮನವಿ ಮಾಡಿಕೊಳ್ಳಲಾಗಿತ್ತು. ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ದ್ಯಾಮಣ್ಣ ಡೊಳ್ಳಿನ್ ಹೇಳಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಕಲ್ಲೇಶ್ ತಾಳದ್, ಪ್ರಚಾರದ ವೇಳೆ ನಡೆದ ಘಟನೆಗೂ ನಮಗೂ ಸಂಬಂಧವಿಲ್ಲ. ರಾಜಕೀಯ ದುರದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಕುಷ್ಟಗಿ ಪಟ್ಟಣದ 207 ನೇ ವಾರ್ಡ್ ನಲ್ಲಿ ನಡೆದ ಘಟನೆ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ದ್ಯಾಮಣ್ಣ ಡೊಳ್ಳಿನ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ಸಂಬಂಧ ಮಹಿಳೆ ಕುಟುಂಬಸ್ಥರು ಮತ್ತು ದ್ಯಾಮಣ್ಣ ರ ನಡುವೆ ಮಾತುಕತೆ ಮೂಲಕ ಸಂಧಾನ ಮಾಡಿಸಲಾಗಿದೆ. ಈ ಸಂಬಂಧ ಮಹಿಳೆಯಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್‍ಐ ವಿಶ್ವನಾಥ್ ಹಿರೇಗೌಡ್ರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=k5Vp8q6yMEI