ಕೊಪ್ಪಳ: ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆ ಪಾಕ್ ವಿರುದ್ಧ ಶಿಕ್ಷಕರೊಬ್ಬರು ಬರೆದ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ಕೊಪ್ಪಳದ ಶಿಕ್ಷಕ ಹನುಮಂತಪ್ಪ ಕುರಿ ಪಾಕಿಸ್ತಾನದ ವಿರುದ್ಧ ಸ್ವತಃ ತಾವೇ ಹಾಡು ಬರೆದು ಹಾಡಿದ್ದಾರೆ. ಕೆಣಕಬೇಡಿ, ಕೆಣಕಬೇಡಿ ಪಾಕಿಗಳೆ. ಕೆಣಕಿ, ತಿಣುಕಬೇಡಿ ತಿರುಬೋಕಿಗಳೆ ಎಚ್ಚರ ಎಂದು ಶಿಕ್ಷಕ ಹಾಡಿದ್ದಾರೆ. ಈ ಹಾಡಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮನ ಗೆದ್ದಿದೆ.
ಒಟ್ಟು 3 ನಿಮಿಷ 42 ಸೆಕೆಂಡ್ ಇರುವ ಈ ಹಾಡಿನಲ್ಲಿ ಪಾಕಿಸ್ತಾನವನ್ನ ಶಿಕ್ಷಕ ಹನುಮಂತಪ್ಪ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಈ ಹಾಡಿನಲ್ಲಿ ನಮ್ಮ ಭಾರತದ ಸರ್ವಧರ್ಮದ ಸೌಹಾರ್ದತೆಯನ್ನು ಹಾಗೂ ಕೆಚ್ಚೆದೆಯ ವೀರರನ್ನು ಹನುಮಂತಪ್ಪ ಅಭಿಮಾನದಿಂದ ಹೊಗಳಿದ್ದಾರೆ. ಜವಾನರಿಗೆ ಜೈಕಾರ ಪಾಕಿ ದಿವಾನರಿಗೆ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹಾಡಿನಿಂದಲೇ ಶಿಕ್ಷಕ ಪಾಕ್‍ಗೆ ಚಾಟಿ ಏಟು ನೀಡಿ ಫುಲ್ ವೈರಲ್ ಆಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv