ಕೊಪ್ಪಳ: ನಟ ಯಶ್ (Yash) ಅಭಿವೃದ್ಧಿ ಪಡಿಸಿದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ(Talluru Lake) ಕೋಡಿ ಬಿದ್ದಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ತಲ್ಲೂರು ಕೆರೆ ಭರ್ತಿಯಾಗಿದೆ. ನೀರಿನ ಸಮಸ್ಯೆಯಾದಾಗ 2017 ರಲ್ಲಿ ಯಶೋಮಾರ್ಗ ಫೌಂಡೇಶನ್‌ನಿಂದ(Yashomarga Foundation) ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಅಭಿವೃದ್ದಿ ಪಡಿಸಿದ ನಂತರ ಇದೇ ಮೊದಲ ಬಾರಿಗೆ ಕೋಡಿ ಬಿದ್ದಿದೆ.
Advertisement
ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು ನೋಡಲು ಸುಂದರಮಯವಾಗಿದ್ದು ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ..!!#YashoMarga pic.twitter.com/hOxHNt6tLW
— YashoMarga (@YashoMarga) September 15, 2022
Advertisement
2008 ರಲ್ಲಿ ಈ ಕೆರೆ ಕೋಡಿ ಬಿದ್ದಿತ್ತು. ಈಗ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಬ್ಬನಿಂದ ಕಾಯಕವಾಗುವುದಿಲ್ಲ, ಎಲ್ಲರೂ ಕೈ ಜೋಡಿಸಬೇಕು: ತಲ್ಲೂರು ಕೆರೆಗೆ ಯಶ್, ರಾಧಿಕಾ ಬಾಗಿನ ಅರ್ಪಣೆ
Advertisement
ಸತತ ಮೂರ್ನಾಲ್ಕು ವರ್ಷಗಳ ಬರದಿಂದ ಸಂಪೂರ್ಣವಾಗಿ 96 ಎಕರೆ ವಿಸ್ತೀರ್ಣದ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಅಲ್ಲದೇ ಸಂಪೂರ್ಣವಾಗಿ ಹೂಳು ಕೂಡಾ ತುಂಬಿಕೊಂಡಿತ್ತು. ಕೆರೆಯಲ್ಲಿ ತುಂಬಿರುವ ಹೂಳು ತಗೆಯಲು 2017 ಫೆಬ್ರವರಿ ತಿಂಗಳಲ್ಲಿ ಹೂಳು ತಗೆಯಲು ಯಶ್ ದಂಪತಿ ಚಾಲನೆ ನೀಡಿದ್ದರು. ಅಂದು ನೀಡಿದ್ದ ಕೆರೆ ಕಾಯಕಕ್ಕೆ ಈಗ ಸಾರ್ಥಕತೆ ಸಿಕ್ಕಿದೆ. ಇದರಿಂದ ಸುಮಾರು 10 ಕ್ಕೂ ಹೆಚ್ಚು ಗ್ರಾಮದ ರೈತರಿಗೆ ಅನುಕೂಲವಾಗಿದೆ.
Advertisement
ನಟ ಯಶ್ ಮಾಡಿರುವ ಈ ಕಾರ್ಯವನ್ನ ರೈತರು ಕೊಂಡಾಡುತ್ತಿದ್ದು, ಬರದ ನಾಡಿನ ಭಗೀರಥ ಬಂದಂಗ ಬಂದು ನಮ್ಮೂರು ಕೆರೆ ಅಭಿವೃದ್ಧಿ ಪಡಿಸಿದ್ದಾರೆ. ಈ ಬಾರಿ ಮಳೆಯೂ ಚೆನ್ನಾಗಿ ಆಯ್ತು, ಕೆರೆನೂ ತುಂಬಿದೆ ಎಂದು ಗ್ರಾಮಸ್ಥರು ಸಂತಸವನ್ನು ಹಂಚಿಕೊಂಡಿದ್ದಾರೆ. ಯಶೋಮಾರ್ಗದ ಮೂಲಕ ತಲ್ಲೂರು ಕೆರೆಯನ್ನು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಇದನ್ನೂ ಓದಿ: ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್
ತಲ್ಲೂರು ಕೆರೆ ಅಭಿವೃದ್ಧಿ ಪಡಿಸಿದ ಬಳಿಕ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಜೊತೆ ಯಶ್ 4 ವರ್ಷದ ಹಿಂದೆ ಮಾತನಾಡಿದ ವೀಡಿಯೋ ಇಲ್ಲಿ ನೀಡಲಾಗಿದೆ.