DistrictsKarnatakaKoppalLatestMain Post

ಜಸ್ಟ್ ಪಾಸ್ ಆದ ಖುಷಿಯಲ್ಲಿ ಮಳೆಯಲ್ಲೇ ಡ್ಯಾನ್ಸ್ ಮಾಡಿದ ವಿದ್ಯಾರ್ಥಿ

ಕೊಪ್ಪಳ: ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅಂತೆಯೇ ಇಲ್ಲೊಬ್ಬ ವಿದ್ಯಾರ್ಥಿ ಜಸ್ಟ್ ಪಾಸ್ ಆದ ಖುಷಿಯಲ್ಲಿ ಮಳೆಯಲ್ಲಿ ನೆನೆದುಕೊಂಡೇ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪ್ರಸಂಗವೊಂದು ನಡೆದಿದೆ.

ಹೌದು. ಕೊಪ್ಪಳ ತಾಲೂಕಿನ ಕಾತರಕಿ ನಿವಾಸಿ ಶಿವರಾಜ್ ಮಳೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಪಾಸ್ ಆದ ಖುಷಿಯನ್ನು ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: SSLC ಫಲಿತಾಂಶ: ಚಿತ್ರದುರ್ಗದ ಆರು ವಿದ್ಯಾರ್ಥಿಗಳು ಮೇಲುಗೈ

ಪೋಷಕರು ಶಿವರಾಜ್‍ಗೆ ನೀನು ಪಾಸ್ ಆಗಲ್ಲ ಎಂದು ಹೇಳಿದ್ದರಂತೆ. ಆದರೆ ಫಲಿತಾಂಶದಲ್ಲಿ ಶಿವರಾಜ್ ಪಾಸ್ ಎಂದು ಬಂದಿದೆ. ಇದನ್ನು ನೋಡಿದ ಶಿವರಾಜ್ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇದನ್ನೂ ಓದಿ: ವಿಜಯನಗರದ ಮೂವರು, ವಿಜಯಪುರದ 6 ವಿದ್ಯಾರ್ಥಿಗಳಿಗೆ ಟಾಪ್ ರ‍್ಯಾಂಕ್ ಗರಿ

ಮಳೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾ ನಾನು ಪಾಸ್ ಆದೆ ಎಂದು ಹೆಳುತ್ತಾ ಕುಣಿದಾಡಿದ್ದಾನೆ. ಇದನ್ನು ಮನೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವೀಡಿಯೋ ಶೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹೆಚ್ಚು ಅಂಕ ಬಂದಿಲ್ಲ ಎಂದು ಕೊರಗುವವರಿಗೆ ಶಿವರಾಜ್ ಮಾದರಿಯಾಗಿದ್ದಾನೆ.

Leave a Reply

Your email address will not be published.

Back to top button