ಕೊಪ್ಪಳ: ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಿಂದಾಗಿ ಕೆಲ ಸಮಸ್ಯೆಗಳು ಬದಲಾಗಿದ್ದನ್ನು ನೀವು ಈ ಹಿಂದೆ ಓದಿದ್ದೀರಿ. ಆದರೆ ಈಗ ಪ್ರಧಾನಿಗೆ ಮಾಡಿದ ಟ್ವೀಟ್ ನಿಂದಾಗಿ ಜಿಲ್ಲೆಯ ರೈತರೊಬ್ಬರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿಜಯಕುಮಾರ್ ಯತ್ನಳ್ಳಿ ಅವರ ಜಮೀನಿನಲ್ಲಿದ್ದ ಕಬ್ಬಿಣದ ವಿದ್ಯುತ್ ಕಂಬವೊಂದು ಬಾಗಿತ್ತು. ವಿದ್ಯುತ್ ಕಂಬ ಬಾಗಿದ್ದರಿಂದ ಪ್ರತಿ ವರ್ಷ ಉಳುಮೆ ಮಾಡಲು ಇವರಿಗೆ ತೊಂದರೆ ಆಗುತಿತ್ತು.
Advertisement
ಈ ಸಮಸ್ಯೆ ನಿವಾರಣೆಗೆ ವಿಜಯಕುಮಾರ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಇವರ ಮನವಿ ಅಧಿಕಾರಿಗಳಿಗೆ ಕೇಳಿಸಲೇ ಇಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ರೈತ ವಿಜಯ್‍ಕುಮಾರ್ ಅವರು ಈ ಸಮಸ್ಯೆಯನ್ನು ಬಗೆ ಹರಿಸಲು ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.
Advertisement
ಪ್ರಧಾನಿಗೆ ಟ್ವೀಟ್ ಮಾಡಿದ ವಿಚಾರ ತಿಳಿದು ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ದಿಢೀರ್ ಆಗಿ ಗುರುವಾರ ಜಮೀನಿಗೆ ಬಂದು ಕಂಬವನ್ನು ಬದಲಾಯಿಸಿ ಹೋಗಿದ್ದಾರೆ.
Advertisement
@narendramodi Respected Sir, Kindly help us on this issue. We tried our level best but there is no response from their end. pic.twitter.com/H50Nbqe8Yq
— vijayakumar (@vyatnalli) June 14, 2017
Advertisement