ಕೊಪ್ಪಳ: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕೊಪ್ಪಳದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದಲ್ಲಿ ಬಿಸಿಲಿನ ತಾಪದಿಂದ ಬೇಸತ್ತ ಬಾಲಕನೊಬ್ಬ ನೀರು….ನೀರು…. ಅಂತಾ ಗೋಳಿಡುತ್ತಲೇ ಕೊನೆಯುಸಿರೆಳೆದಿದ್ದಾನೆ. 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ದೊಡ್ಡ ಬಸವ ಮೃತ ದುರ್ದೈವಿ ಬಾಲಕ.
ನಡೆದಿದ್ದೇನು?: ಬಾಲಕ ಶುಕ್ರವಾರ ಏಕಾಏಕಿ ನೀರು.. ನೀರು.. ಎಂದು ಚಡಪಡಿಸಿದ್ದಾನೆ. ಆಸ್ಪತ್ರೆಗೆ ದಾಖಲಿಸಿ, ಚಿಲಿತ್ಸೆ ಕೊಡಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಸುತ್ತಲೂ ತಗಡಿನಿಂದ ನಿರ್ಮಿಸಿದ ಶೆಡ್ ನಲ್ಲಿ ಬಾಲಕನ ಕುಟುಂಬ ವಾಸಿಸುತ್ತಿದೆ. ಬಿಸಿಲಿನ ಬೇಗೆಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಮಧ್ಯಾಹ್ನ ಬಾವಿಯೊಂದರಲ್ಲಿ ಈಜಾಡಿ ಬಂದ ನಂತರ ಬಾಲಕ ನೀರು.. ನೀರು ಎಂದು ಪರಿತಪಿಸುತ್ತಿದ್ದನು ಅಂತಾ ಪೋಷಕರು ಹೇಳಿದ್ದಾರೆ. ಇದೀಗ ಬಾಲಕನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿ ವೃದ್ಧೆ ಹಾಗೂ ಕಲಬುರಗಿಯಲ್ಲಿ ಭಿಕ್ಷುಕರೊಬ್ಬರು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದರು.
ಇದನ್ನೂ ಓದಿ: ಬಿಸಿಲ ಧಗೆ ಡೇಂಜರ್ – ಕೂಲ್ ಆಗೋಕೆ ನೀವೀ ಸುದ್ದಿ ಓದ್ಲೇಬೇಕು!