ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಡುವ ಮೊದಲೇ ಮಹಿಳೆಯೊಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.
ಶೈಲಜಾ ಹುಳ್ಳಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಕೆಲಸದ ನಿರಾಕರಣೆ ಹಿನ್ನಲೆಯಲ್ಲಿ ಇಂದು ಕೊಪ್ಪಳದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಶೈಲಜಾ ಮನವಿ ಕೊಡಲು ಮುಂದಾಗಿದ್ದರು. ಆದರೆ ಸಿಎಂಗೆ ಮನವಿ ನೀಡುವ ಮೊದಲೇ ಶೈಲಜಾಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಶೈಲಜಾ ಹುಳ್ಳಿ ಕೊಪ್ಪಳದ ಮೆಡಿಕಲ್ ಕಾಲೇಜ್‍ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಫೆಬ್ರುವರಿ 4 ರಂದು ಏಕಾಏಕಿ ಇವರನ್ನು ಸೇರಿದಂತೆ 18 ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಕೋಪಗೊಂಡ ಶೈಲಜಾ ಸ್ಟೋರ್ ಕೀಪರ್ ಸತ್ಯನಾರಾಯಣ್‍ಗೆ ಧರ್ಮದೇಟು ನೀಡಿದ್ದರು.
Advertisement
ಕೆಲಸದಿಂದ ತಗೆಯಲು ಸತ್ಯನಾರಾಯಣನೇ ಕಾರಣ ಎಂದು ಶೈಲಜಾ ಚಪ್ಪಲಿ ಏಟು ನೀಡಿದ್ದರು. ನಂತರ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯಿಂದ ಶೈಲಜಾಗೆ ಕೆಲಸ ನೀಡಲು ನಿರಾಕರಣೆ ಮಾಡಿತ್ತು.
Advertisement
ಸಮಾವೇಶದಲ್ಲಿ ಸುಮಾರು 1,497 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ.